ಸಂಘಪರಿವಾರದ ಮುಖಂಡರಿಗೆ ಎಚ್ಚರಿಕೆಯಿಂದ ಇರಲು ಪೊಲೀಸರ ಸೂಚನೆ

ಮಂಗಳೂರು ಜನವರಿ 10: ಕರಾವಳಿಯ ಸಂಘಪರಿವಾರದ ಮುಖಂಡರಿಗೆ ಅಲರ್ಟ್ ಆಗಿರಲು ಪೊಲೀಸ್ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಹೇಳಲಾಗಿದೆ.

ಕರಾವಳಿಯಲ್ಲಿರುವ ಸಂಘ ಪರಿವಾರದ ಪ್ರಮುಖ ನಾಯಕರಾದ ಶರಣ್ ಪಂಪ್ ವೆಲ್, ಜಗದೀಶ್ ಶೇಣವ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಎಚ್ಚರಿಕೆಯಿಂದ ಇರಲು ಪೊಲೀಸರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಶರಣ್ ಪಂಪ್ ವೆಲ್ ಗೆ ಪೊಲೀಸರು ಈ ಕುರಿತಂತೆ ಮಾಹಿತಿ ನೀಡಿದ್ದಾರೆ.

ಆದರೆ, ಪೊಲೀಸರು ಯಾಕೆ ಹೇಳಿದರೆಂದು ಎಂಬ ಮಾಹಿತಿ ಸಂಘ ಪರಿವಾರದ ಮುಖಂಡರಿಗೆ ಇನ್ನು ಸಿಕ್ಕಿಲ್ಲ. ಪೊಲೀಸರಿಂದ ಮಾಹಿತಿ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಸಂಘ ಪರಿವಾರದ ಮುಖಂಡರ ಅಲರ್ಟ್ ಆಗಿದ್ದಾರೆ.

5 Shares

Facebook Comments

comments