Connect with us

KARNATAKA

ಹಸಿರು ಪಟಾಕಿಯೊಂದಿಗೆ ದೀಪಾವಳಿ ಆಚರಿಸಲು ಸಿಎಂ ಯಡಿಯೂರಪ್ಪ ಕರೆ

ಬೆಂಗಳೂರು ನವೆಂಬರ್ 06:ಪಟಾಕಿ ಸಿಡಿಸುವುದರಿಂದ ಕೊರೊನಾ ಸೊಂಕಿತರಿಗೆ ಸಮಸ್ಯೆಯಾಗುವ ಸಾಧ್ಯತೆ ಹಿನ್ನಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಿಪಾವಳಿ ಸಂದರ್ಭ ಎಲ್ಲಾ ರೀತಿಯ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿ ಆದೇಶಿಸಿದ್ದರು. ಆದರೆ ಈ ಆದೇಶಕ್ಕೆ ಹಿಂದೂ ಸಂಘಟನೆಗಳ ವಿರೋಧ ಬಂದ ಹಿನ್ನಲೆ ಈಗ ಆದೇಶದಲ್ಲಿ ನಿರ್ಧಾರದಲ್ಲಿ ಸಣ್ಣ ಮಾರ್ಪಾಡು ಮಾಡಿರುವ ಸರಕಾರ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿದೆ.


ಈ ಬಗ್ಗೆ ರಾಜ್ಯದ ಜನತೆಗೆ ಮನವಿ ಮಾಡಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಸಿರು ಪಟಾಕಿ ಬಳಸಿ, ಸರಳ ದೀಪಾವಳಿ ಆಚರಿಸಿ ಎಂದು ಕರೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ವೈರಸ್‌ ನಿಯಂತ್ರಣಕ್ಕೆ ರಾಜ್ಯ ಸರಕಾರ ಇಲ್ಲಿಯವರೆಗೂ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇಂತಹ ಸಮಯದಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.


ಈ ಬಾರಿಯ ದೀಪಾವಳಿಯನ್ನು ಹಸಿರು ಪಟಾಕಿಯೊಂದಿಗೆ ಆಚರಿಸಿ ಎಂದು ಹೇಳಿರುವ ಸಿಎಂ ಬಿಎಸ್‌ವೈ, ಸರಳವಾಗಿ, ಅರ್ಥಗರ್ಭಿತವಾಗಿ, ಭಕ್ತಿಪೂರ್ವಕವಾಗಿ ಹಬ್ಬ ಆಚರಿಸುವುದು ಸೂಕ್ತ ಎಂದು ಮುಂಚಿತವಾಗಿಯೇ ರಾಜ್ಯದ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ಬಿಎಸ್‌ ಯಡಿಯೂರಪ್ಪ ಕೋರಿದ್ದಾರೆ.

ಕಳೆದ ವರ್ಷ ಸಿಎಸ್‌ಐಆರ್‌ ಮತ್ತು ಎನ್‌ಇಆರ್‌ಐ ವಿಜ್ಞಾನಿಗಳು ಹಸಿರು ಪಟಾಕಿಗಳನ್ನು ಅಭಿವೃದ್ಧಿಪಡಿಸಿದ್ದರು. ಶೇ.30ಕ್ಕಿಂತ ಕಡಿಮೆ ವಾಯುಮಾಲಿನ್ಯಕಾರಕ ಅಂಶಗಳನ್ನು ಹೊಂದಿರುವ ಹಾಗೂ ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಶಬ್ಧ ಮಾಡುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *