DAKSHINA KANNADA
ದಕ್ಷಿಣಕನ್ನಡ ಜಿಲ್ಲೆ- ಗ್ರಾಮಪಂಚಾಯತ್ ಚುನಾವಣೆ ಮತದಾನ ಆರಂಭ…
ಪುತ್ತೂರು ಡಿಸೆಂಬರ್ 22 : ಕೊರೋನಾ ಸೋಂಕು ಆತಂಕದ ನಡುವೆ ರಾಜ್ಯದ 3019 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಚುನಾವಣೆ ಮಂಗಳವಾರ ಆರಂಭಗೊಂಡಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.
ಇಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯಲಿದೆ. ರಾಜ್ಯದ 117 ತಾಲ್ಲೂಕುಗಳ 3019 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, 117383 ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾವಣೆಗಾಗಿ ಮತದಾರರು ಮತಗಟ್ಟೆಯತ್ತ ಉತ್ಸಾಹದಿಂದ ಬರಲಾರಂಭಿಸಿದ್ದಾರೆ.
ಇನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಗ್ರಾಮಪಂಚಾಯತ್ ಗಳಿಗೆ ಮತದಾನ ಆರಂಭವಾಗಿದ್ದು, ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಸಜಿಪನಡು ಗ್ರಾಮಪಂಚಾಯತ್ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡುತ್ತಿದ್ದು, ಮತದಾರನನ್ನು ಕಾರು ಹಾಗೂ ರಿಕ್ಷಾಗಳಲ್ಲಿ ಅಭ್ಯರ್ಥಿಗಳು ಕರೆ ತರುತ್ತಿದ್ದಾರೆ.
ಈ ನಡುವೆ ಮತದಾನದ ರಕ್ಷಣೆಗಾಗಿ ನೇಮಿಸಿದ ಯಾವುದೇ ಉಟೋಪಚಾರದ ವ್ಯವಸ್ಥೆ ಮಾಡದೇ ಉಪವಾಸ ಇರುವಂತೆ ಮಾಡಲಾಗಿದ್ದು, ಸಜಿಪನಡು ಗ್ರಾಮಪಂಚಾಯತ್ ಅಧಿಕಾರಿಗಳ ವಿರುದ್ಧ ಪೊಲೀಸ್ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.