LATEST NEWS
ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಚ್ಚಲು ಸರಕಾರ ಆದೇಶ

ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಚ್ಚಲು ಸರಕಾರ ಆದೇಶ
ಉಡುಪಿ ಸೆಪ್ಟೆಂಬರ್ 20: ನೂರಾರು ವರುಷಗಳ ಇತಿಹಾಸವಿರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಾಗಿಲು ಮುಚ್ಚಲು ಸರಕಾರ ಅಂತಿಮ ಆದೇಶ ನೀಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ಯೊಂದು ಕಾರ್ಯ ಆರಂಭಿಸಿದ್ದು, ಇದೇ ನೆಪದಲ್ಲಿ ಹಾಜೀ ಅಬ್ದುಲ್ಲಾ ಸಾಹೇಬರು ನೀಡಿದ್ದ ಸರ್ಕಾರಿ ಆಸ್ಪತ್ರೆ ಯ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲು ಸದ್ದಿಲ್ಲದೆ ಸಿದ್ಧತೆ ನಡೆಸಿದೆ.
ಉಡುಪಿಯ ಹೃದಯ ಭಾಗದಲ್ಲಿ ಇರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಹಾಜೀ ಅಬುಲ್ದಾ ಎಂಬ ಸಮಾಜ ಸೇವಾ ಧುರೀಣರು ಬಹಳ ವರ್ಷಗಳ ಹಿಂದೆ ದೂರದೃಷ್ಟಿ ಇಟ್ಟು ತಮ್ಮ ಜಮೀನನ್ನು ಸರಕಾರಿ ಆಸ್ಪತ್ರೆಗೆ ನೀಡಿದ್ದರು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಬಿ ಆರ್ ಶೆಟ್ಟಿ ಬಳಗಕ್ಕೆ ಯಾವುದನ್ನೂ ಯೋಚಿಸದೆ ಆಸ್ಪತ್ರೆ ಕಟ್ಟಲು ಅನುಮತಿ ನೀಡಿತ್ತು.

ಆ ಸಂದರ್ಭದಲ್ಲಿ ಬಿ ಆರ್ ಶೆಟ್ಟಿ ಸಂಸ್ಥೆ ಬಡ ರೋಗಿಗಳಿಗೆ ಹಲವು ಆಶ್ವಾಸನೆ ನೀಡಿ ಆಸ್ಪತ್ರೆಯನ್ನು ಆರಂಭಿಸಿತು. ಸದ್ಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇರುವ ಪ್ರದೇಶದಲ್ಲಿ ಬಿ ಆರ್ ಶೆಟ್ಟಿ ಸಂಸ್ಥೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಅನುಮತಿ ನೀಡಲಾಗಿದೆ. ಈ ಮಧ್ಯೆ ಉಡುಪಿ ಜಿಲ್ಲೆಯ ಜನರಿಗೆ ವರದಾನದಂತಿದ್ದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಚ್ಚಲು ಸರಕಾರ ಆದೇಶಿಸಿದೆ.
ಈ ಮೂಲಕ ಜನಸಾಮಾನ್ಯರ ಪಾಲಿಗೆ ಆಶಾಕಿರಣವಾಗಿದ್ದ ಆಸ್ಪತ್ರೆಗೆ ಅಂತಿಮ ಮೊಳೆ ಬಿದ್ದಿದೆ. ಸುಮಾರು 60 ಅರೆ ಕಾಲಿಕ ಸಿಬ್ಬಂದಿಗಳು 25 ಖಾಯಂ ಸಿಬ್ಬಂದಿಗಳು 7 ಡಾಕ್ಟರ್ ಗಳ ಬದುಕು ತೊಂದರೆಯಲ್ಲಿದ್ದಾರೆ.
ಒಟ್ಟಾರೆಯಾಗಿ ಸಿದ್ದರಾಮಯ್ಯ ಸರಕಾರ ಸ್ಥಳೀಯರನ್ನು ಸಂಪರ್ಕಿಸದೆ ನಮ್ಮ ಮನೆಯ ಸ್ವಂತ ಆಸ್ತಿಯನ್ನು ಕೊಟ್ಟಂತೆ ಹಾಜೀ ಅಬ್ದುಲ್ಲರು ನೀಡಿದ ಜಮೀನನ್ನು ಬಿ ಆರ್ ಶೆಟ್ಟಿಗೆ ಹಸ್ತಾಂತರಿಸಿದ್ದಾರೆ.ಹೊಸ ಕಟ್ಟಡ ನಿರ್ಮಾಣವಾಗಿದೆ.
ಆದರೆ ಹಳೆ ಭರವಸೆ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜೊತೆಗೆ ಉಚಿತ ಚಿಕಿತ್ಸೆ ದೊರೆಯುವ ಬಗ್ಗೆ ಆಶಯ ಹೊಂದಿದ್ದ ಜನರಿಗೆ ನಿರಾಸೆ ಕಾದಿದೆ. ಮಹಿಳಾ ಮಕ್ಕಳ ಆಸ್ಪತ್ರೆ ಮುಚ್ಚಲು ಸರಕಾರ ಹೊರಡಿಸಿದ ಆದೇಶ ಬಡ ಬಗ್ಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.