DAKSHINA KANNADA
ಸರಕಾರಿ ನೌಕರರ ಮುಷ್ಕರ: ಪುತ್ತೂರಿನ ಎಲ್ಲಾ ಸರಕಾರಿ ಕಛೇರಿಗಳು ಬಂದ್

ಪುತ್ತೂರು, ಮಾರ್ಚ್ 01: ಸರಕಾರಿ ನೌಕರರ ಮುಷ್ಕರ ಹಿನ್ನಲೆ ಪುತ್ತೂರಿನ ಎಲ್ಲಾ ಸರಕಾರಿ ಕಛೇರಿಗಳು ಸಂಪೂರ್ಣ ಬಂದ್ ಆಗಿದ್ದು, ಕಛೇರಿ ಬಂದ್ ಮಾಡಿರು ಕಾರಣ ಆಧಿಕಾರಿಗಳು ಹೊರಗಡೆ ನಿಲ್ಲುವಂತಾಗಿದೆ.
ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ರವರು ಕಛೇರಿಗೆ ತೆರಳಲು ಮಿನಿ ವಿಧಾನ ಸೌಧದ ಮುಂದೆ ಕಾದ ಘಟನೆ ನಡೆದಿದೆ. ಮುಷ್ಕರ ಹಿನ್ನಲೆಯಲ್ಲಿ ಮಿನಿ ವಿಧಾನಸೌಧಕ್ಕೆ ಬೀಗ ಜಡಿದು ನೌಕರರು ತೆರಳಿದ್ದು, ಆಯುಕ್ತರು ಬೀಗ ತರಿಸಿ ಕಛೇರಿಯೊಳಗೆ ಹೋಗಿದ್ದಾರೆ. ಮುಷ್ಕರದ ಅರಿವಿಲ್ಲದೆ ಜನಸಾಮಾನ್ಯರು ಕಛೇರಿ ಮುಂದೆ ಕಾಯುವಂತಾಗಿದೆ.
