LATEST NEWS
ಬೈಂದೂರು- ಭಯೋತ್ಪಾದಕರ ಬಗ್ಗೆ ಮೂಕಾಂಬಿಕೆ ನಿರ್ಧರಿಸಲಿ: ಗೋಪಾಲ ಪೂಜಾರಿ

ಬೈಂದೂರು ಎಪ್ರಿಲ್ 19: ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಭಯೋತ್ಪಾ ಹಾಗೆ ಬೆಂಬಲ ಕೊಟ್ಟಿರುವ ಕೇಸುಗಳಿದ್ದರೆ ತೋರಿಸಬೇಕು. ಇಲ್ಲವಾದಲ್ಲಿ ಈ ಕ್ಷೇತ್ರದ ಜನರೆದುರುವ ನೀವು ಕ್ಷಮೆ ಕೇಳಬೇಕು. ನಿಮ್ಮ ಹೇಳಿಕೆಗೆ ಕೇಸು ಹಾಕಲು ಹೋಗಲ್ಲ. ಸತ್ಯವೋ, ಸುಳ್ಳೋ ಅವಳೇ ನಿರ್ಧರಿಸುತ್ತಾಳೆ. ನಿಮ್ಮ ಸುಳ್ಳುಗಳು ಇಲ್ಲಿಗೆ ಕೊನೆಯಾಗಬೇಕು ಎಂದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಗುಡುಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪಕ್ಕೆ ಸಲ್ಲಿಸುವ ಮೊದಲು ಸಹಸ್ರಾರು ಕಾರ್ಯಕರ್ತರೊಂದಿಗೆ ಯಡ್ತರೆ ಬೈಪಾಸ್ ನಿಂದ ಪಾದಯಾತ್ರೆ, ನಡೆಸಿ ಬಳಿಕ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ನಡೆದ ಬೃಹತ್ ಬಹಿರಂಗಸಭೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಅವರ ‘ಭಯೋತ್ಪಾದಕರು ಹೇಳಿಕೆ ಖಂಡಿಸಿ ಮಾತನಾಡಿದರು.
ನಾಲ್ಕು ಬಾರಿ ಶಾಸಕನಾಗಿ ಈ ಕ್ಷೇತ್ರದ ಜನರ ಪ್ರಾಮಾಣಿಕ ಸೇವೆ ಮಾಡಿದ ನನಗೆ ಹಾಗೂ ನನ್ನ ಕಾರಕರ್ತರಿಗೆ ಭಯೋತ್ಪಾದಕರು ಎಂದು ಕರೆದದ್ದು ಮನಸಿಗೆ ಭಾರಿ ನೋವಾಯಿತು ಎಂದರು.
