Connect with us

    BANTWAL

    ಯಕ್ಷ ಪ್ರೇಮಿಗಳಿಗೆ ಶುಭ ಸುದ್ದಿ:ಕಟೀಲು ಮೇಳದ ಯಕ್ಷಗಾನ ಇನ್ನು ರಾತ್ರಿಯಿಡಿ ಪ್ರದರ್ಶನ..!

    ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಯಕ್ಷಗಾನ ಜ.14ರಿಂದ ಮತ್ತೆ ಹಳೆಯ ಪದ್ಧತಿಯಲ್ಲಿ ರಾತ್ರಿಯಿಡಿ ಪ್ರದರ್ಶನ ಕಾಣಲಿದೆ.

    ಕರ್ನಾಟಕ ಹೈ ಕೋರ್ಟ್ ಇದಕ್ಕೆ ಅನುಮತಿ ನೀಡಿದೆ, ಶಬ್ದಮಾಲಿನ್ಯ ಮಿತಿಯ ನಿಯಮದಿಂದಾಗಿ ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಈ ಬಾರಿಯೂ ಸುಮಾರು ಒಂದೂವರೆ ತಿಂಗಳ ಕಾಲ ಕಾಲಮಿತಿಯಲ್ಲಿ ಪ್ರದರ್ಶನ ನೀಡಿದೆ. ಹೈಕೋರ್ಟ್‌ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ಜ.14ರ ಮಕರ ಸಂಕ್ರಮಣದಿಂದ ಬೆಳಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮುಕ್ತೇಸರ ಕೊಡೆತ್ತೂರುಗುತ್ತು ಸನತ್‌ ಕುಮಾರ್‌ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.
    ಬೆಂಗಳೂರಿನ ಕೃಷ್ಣಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌, ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆ ಇಲ್ಲ, ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿತ್ತು. ಶಬ್ದಮಾಲಿನ್ಯ ಉಂಟಾಗಲಾರದು, ಧ್ವನಿವರ್ಧಕ ಬಳಕೆಯಿಂದ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ, ನಗರದಲ್ಲಿ ಅದರ ಶಬ್ದಮಿತಿಯನ್ನು ನೋಡಿಕೊಳ್ಳಲಾಗುವುದು, ಇದು ಹರಕೆಯ ಆಟವಾದ್ದರಿಂದ ಜನರಿಗೆ ಯಾವುದೇ ಸಮಸ್ಯೆಯೂ ಆಗಲಾರದು ಎಂದು ನ್ಯಾಯಾಲಯದಲ್ಲಿ ವಾದಿಸಲಾಗಿತ್ತು. ಈ ವಾದವನ್ನು ಒಪ್ಪಿಕೊಂಡಿರುವ ನ್ಯಾಯಾಲಯ ಆರೂ ಮೇಳಗಳ ಆಟವನ್ನು ಪೂರ್ಣ ರಾತ್ರಿ ನಡೆಸಲು ಅನುಮತಿ ನೀಡಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply