Connect with us

LATEST NEWS

ಮರಾಠಿ ಜನಾಂಗದವರ ಗೊಂದೋಲು ಸಂಸ್ಕೃತಿ ಕರಾವಳಿಯಲ್ಲಿ ಇಂದಿಗೂ ಜೀವಂತ

ಉಡುಪಿ ಜನವರಿ 20: ಗೊಂದೊಲು ಕರಾವಳಿ ಭಾಗದಲ್ಲಿ ಕಂಡು ಬರುವ ಅಪರೂಪದಲ್ಲೇ ಅಪರೂಪದ ಆಚರಣೆ. ಉಡುಪಿ ಭಾಗದಲ್ಲಿ ಗೊಂದೊಲು ಆಚರಣೆ ಈಗಲೂ ಸೇವಾ ರೂಪದಲ್ಲಿ ಕೆಲವು ಕಡೆಗಳಲ್ಲಿ ನಡೆಯುತ್ತದೆ. ಅದರಂತೆ ಇತ್ತೀಚೆಗೆ ಮಂಚಿಯ ಗಣೇಶ ಅವರ ಮನೆಯಲ್ಲಿ ಅಪರೂಪದ ಗೊಂದಲು ಸೇವೆ ನಡೆಯಿತು.

ಚಪ್ಪೇಗಾರ್ ಸಮುದಾಯದವರು ಈ ಗೊಂದೊಲು ಸೇವೆ ನಡೆಸುತ್ತಾರೆ. ಗೊಂದೊಲು ಸೇವೆ ನಡೆಸಲು ಇರುವ ಮನೆಗೆ ಚಪ್ಪೇಗಾರ್ ಸಮುದಾಯದವರು, ಅಮ್ಮನವರ ಮೂರ್ತಿ ತಂದು ಅದನ್ನು ಗದ್ದುಗೆಯಲ್ಲಿ ಇಟ್ಟು ಪೂಜಿಸುತ್ತಾರೆ. ಬಳಿಕ ಅಮ್ಮನವರ ಮೂರ್ತಿ ಎದುರುಗಡೆ, ವಿಶೇಷ ಗೊಂದುಳು ನರ್ತನ ಮಾಡುತ್ತಾರೆ.

ಆರಂಭದಲ್ಲಿ ಮನೆಯವರು ಸೇರಿದವರು, ಸಣ್ಣ ದೀಟಿಗೆ ಹಿಡಿದು ವೃತ್ತವಾಗಿ ನರ್ತನ ಮಾಡುತ್ತಾರೆ. ಬಳಿಕ ಚಪ್ಪೇಗಾರ್ ಸಮುದಾಯದವರು, ಯಕ್ಷಗಾನ ಶೈಲಿಯ ವೇಷ ತೊಟ್ಟು ವಾದ್ಯ ಹಾಗೂ ತಾಸೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತನ ಮಾಡುತ್ತಾರೆ. ಗೊಂದೊಲು ಸೇವೆಯನ್ನು ಹರಕೆ ಹಾಗೂ ಸೇವಾ ರೂಪದಲ್ಲಿ ನಡೆಸುತ್ತಾರೆ. ಹಿಂದೆ ಗೊಂದೊಲು ಕರಾವಳಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಗೊಂದುಳು ಅಪರೂಪವಾಗಿದೆ..

ತುಳು ಭಾಷಿಕರ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಜನಾಂಗದವರು ಇದ್ದಾರೆ.ಇವರೆಲ್ಲಾ ದೂರದ ತುಳಜಾಪುರದಿಂದ ಸಾವಿರ ವರ್ಷಗಳ ಹಿಂದೆಯೇ ವಲಸೆ ಬಂದವರು, ಊರು ಬಿಟ್ಟು ಬಂದವರು ತಮ್ಮ ಜೊತೆಗೆ ಶ್ರೀಮಂತ ಜನಪದ ಸಂಸ್ಕೃತಿಯನ್ನು ಹೊತ್ತು ತಂದಿದ್ದಾರೆ, ಅದು ಇವತ್ತಿಗೂ ಜೀವಂತವಾಗಿದೆ ಅನ್ನೋದೇ ಸೋಜಿಗ

VIDEO:

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *