Connect with us

DAKSHINA KANNADA

ತನ್ನ ಮನೆಯಲ್ಲೆ ಚಿನ್ನ ಕದ್ದು..ಪೊಲೀಸರಿಗೆ ಸಿಕ್ಕಿಬಿದ್ದ ಮನೆಯೊಡತಿ

ಪುತ್ತೂರು ಜೂನ್ 27: ಮೂರು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ಕಳ್ಳತನ ನಡೆಸಿದ್ದು ಮಾತ್ರ ಮನೆಯ ಒಡತಿ. ಇದೆ ತಿಂಗಳ 24 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡ ಎಂಬವರ ನಿವಾಸದಿಂದ ಕಳ್ಳರು ಸುಮಾರು 60 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.


ಪ್ರಕರಣದ ಬೆನ್ನತ್ತಿದ ಪೊಲೀಸರು ತನಿಖೆ ನಡೆಸಿದಾಗ ಪುರುಷೋತ್ತಮ ಗೌಡ ಅವರ ಹೆಂಡತಿ ಮಮತ ಎಂಬವರೇ ಈ ಕಳ್ಳತನ ನಡೆಸಿರುವ ಬಗ್ಗೆ ದೃಢವಾಗಿತ್ತು. ಪುರುಷೋತ್ತಮ ಗೌಡರವರ ಪತ್ನಿ ಮಮತ ವೈಯಕ್ತಿಕ ಹಣಕಾಸಿನ ವ್ಯವಹಾರದ ನಿಮಿತ್ತ ಸದರಿ ಆಭರಣಗಳನ್ನು ಕಳ್ಳತನ ಮಾಡಿದ್ದು, ನಂತರ ತನ್ನ ಪತಿ ಬಳಿ ಆಭರಣ ಕಳ್ಳತನವಾಗಿರುವುದಾಗಿ ಎಂದು ಸುಳ್ಳು ಮಾಹಿತಿ ನೀಡಿದ್ದರು. ಆದರೆ ಪೊಲೀಸ್ ತನಿಖೆಯ ವೇಳೆ ಸದರಿ ಆರೋಪಿ ಮಮತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪ್ರಸ್ತುತ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿರುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *