Connect with us

BELTHANGADI

ಬೆಳ್ತಂಗಡಿ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವು

ಬೆಳ್ತಂಗಡಿ, ಜೂ 27: ವಿದ್ಯುತ್ ಟ್ರಾನ್ಸ್ ಫಾರ್ಮರ್ ರಿಪೇರಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತರನ್ನು ಬಿಜಾಪುರದ ಇಂಡಿ ಮೂಲದ ಬಸವರಾಜು(26) ಎಂದು ಗುರುತಿಸಲಾಗಿದೆ.

ಇವರು ಕಲ್ಲೇರಿ ಮೆಸ್ಕಾಂ ಉಪವಿಭಾಗದ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬೆಳ್ತಂಗಡಿಯ ಕುಪ್ಪೆಟ್ಟಿ ಬಳಿಯ ಪಿಲಿಗೂಡು ಹುಣಸೆಕಟ್ಟೆಯಲ್ಲಿ ಎಂಬಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ವಿದ್ಯುತ್ ಕಂಬವೊಂದರ ಪಿನ್ ನಲ್ಲಿ ಸಮಸ್ಯೆ ಉಂಟಾಗಿತ್ತು. ಸ್ಥಳೀಯರು ನೀಡಿದ ದೂರಿನ ಮೇರೆಗೆ ಬಸವರಾಜು ಹೈ ಟೆನ್ಶನ್ ತಂತಿಯ ಡಿಸ್ಕ್ ಗ್ರೌಂಡ್ ನ ಕಾರ್ಯ ನಿರ್ವಹಿಸುತ್ತಿರುವಾಗ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments