LATEST NEWS
ಗಗನಕ್ಕೇರಿದ ಚಿನ್ನದ ಬೆಲೆ – ಕೊನೆಗೂ 1 ಲಕ್ಷ ದಾಟಿದ 10 ಗ್ರಾಂ ಚಿನ್ನದ ಬೆಲೆ

ನವದೆಹಲಿ ಎಪ್ರಿಲ್ 22: ಕೊನೆಗೂ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಬರೋಬ್ಬರಿ 10 ಗ್ರಾಂ ಚಿನ್ನದ ಬೆಲೆ ಇದೀಗ 1 ಲಕ್ಷ ದಾಟಿದೆ. 24 ಕ್ಯಾರೆಟ್ (99.9 ಶುದ್ಧತೆ) ಚಿನ್ನದ ಬೆಲೆ ಮಂಗಳವಾರ ಒಂದು ಗ್ರಾಂಗೆ ₹10,135 ತಲುಪಿದ್ದು, 10 ಗ್ರಾಂಗೆ ₹1,01,350 ಏರಿಕೆಯಾಗಿದೆ.
ಭಾರತದಲ್ಲಿ ಚಿನ್ನದ ದರ ₹1ಲಕ್ಷ ದಾಟಿರುವುದು ಇದೇ ಮೊದಲು. 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ ₹9,290 ಏರಿಕೆಯಾಗಿದೆ. 10 ಗ್ರಾಂ.ಗೆ ₹92, 900ಗೆ ತಲುಪಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.

ವಿದೇಶಗಳಲ್ಲೂ ಚಿನ್ನದ ಬೆಲೆ ದಾಖಲೆ ಬರೆದಿದೆ. ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಲ್ಲೂ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,100 ರುಪಾಯಿಯಲ್ಲಿ ಇದೆ.