DAKSHINA KANNADA
ಗತಿ ಇಲ್ಲದವರು ನನ್ನ ಸಾಕಬೇಡಿ – ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಪುತ್ತೂರು ಸೆಪ್ಟೆಂಬರ್ 14: ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ವ್ಯಕ್ತಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಡಬದ ಪೇಟೆಯಲ್ಲಿ ಇತ್ತೀಚೆಗೆ ಆಡುಗಳ ಉಪಟಲ ಜಾಸ್ತಿಯಾಗಿದ್ದು,ಆಡು ಸಾಕು ಮಂದಿ ಆಡುಗಳನ್ನು ಮೇಯಲು ರಸ್ತೆ ಸಮೀಪವೇ ಬಿಟ್ಟಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸಮಸ್ಯೆಯಾಗಿದ್ದು, ಆಡುಗಳಿಂದಾಗಿ ಕೆಲವು ಬೈಕ್ ಗಳ ಅಪಘಾತವೂ ನಡೆದಿದೆ.

ಈ ಕುರಿತಂತೆ ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಹಿನ್ನಲೆ ಆಡಿನ ಕತ್ತಿಗೆ ಪ್ಲೇ ಕಾರ್ಡ್ ಅಳವಡಿಸಿ ವಿಶೇಷ ಪ್ರತಿಭಟನೆ ಮಾಡಲಾಗಿದ್ದು, ಪ್ಲೇಕಾರ್ಡ್ ನಲ್ಲಿ ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನ ಹೊಣೆ ಮಾಡಬೇಡಿ ಎಂದು ಬರೆಯಲಾಗಿದೆ.