LATEST NEWS
ಕಡಬ ಪೇಟೆಯಲ್ಲಿ ಬೀದಿನಾಯಿಗಳ ರೌಡಿಸಂಗೆ ಆಡು ಬಲಿ..!

ಕಡಬ : ದಕ್ಷಿಣ ಕನ್ನಡ ಜಿಲ್ಲೆ ಯ ಕಡಬದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಡಬ ಪೇಟೆಯಲ್ಲಿ ಅಲೆದಾಡುತ್ತಿದ್ದ ಆಡನ್ನು ಬೆನ್ನಟ್ಟಿದ್ದ ಬೀದಿನಾಯಿಗಳು ಅದರ ಹಿಂಬದಿ ಕಚ್ಚಿ ಎಳೆದಾಡಿ ಸಿಗಿದು ಹಾಕಿದ ಘಟನೆ ನಡೆದಿದೆ. ಬಡಪಾಯಿ ಆಡಿನ ಕಾಲು ಸಹಿತ ಹಿಂಭಾಗದ ಮಾಂಸವನ್ನು ಬೀದಿನಾಯಿಗಳು ಕಚ್ಚಿ ತಿಂದಿದ್ದು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿದ ಆಡು ಪ್ರಾಣ ಕಳೆದುಕೊಂಡಿದೆ. ಬೀದಿ ನಾಯಿಗಳ ದಾಳಿಯಿಂದ ಆಡನ್ನು ರಕ್ಷಿಸಲು ಸ್ಥಳೀಯ ವರ್ತಕರು ಮುಂದಾಗಿದ್ದರೂ ನಾಯಿಗಳ ಗುಂಪು ದಾಳಿಯಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ. ಹಲವು ಬಾರಿ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ ನೀಡಿದ್ದರೂ ಮಾಲಿಕರು ಕ್ಯಾರೇ ಎನ್ನದೆ ರಸ್ತೆಗೆ ಬಿಡುತಿದ್ದು ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ.
