LATEST NEWS
ಮಾಹಿತಿ ಹಕ್ಕು ಅಧಿನಿಯಮದಡಿ ಸ್ಪಷ್ಟ ಮಾಹಿತಿ ನೀಡಿ- ರಾಜ್ಯ ಮಾಹಿತಿ ಅಯುಕ್ತರು
ಮಾಹಿತಿ ಹಕ್ಕು ಅಧಿನಿಯಮದಡಿ ಸ್ಪಷ್ಟ ಮಾಹಿತಿ ನೀಡಿ- ರಾಜ್ಯ ಮಾಹಿತಿ ಅಯುಕ್ತರು
ಉಡುಪಿ, ಜನವರಿ 10 : ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕರಿಸುವ ಅರ್ಜಿಗಳಿಗೆ ಸಂಬಂದಿಸಿದಂತೆ, ಕಚೇರಿಯಲ್ಲಿ ಸ್ಪಷ್ಟ ಮಾಹಿತಿ ನೀಡಿ, ಅಸ್ಪಷ್ಟ ಮಾಹಿತಿ ನೀಡಿ ಅರ್ಜಿದಾರರು ಮೇಲ್ಮನವಿ ಸಲ್ಲಿಸುವಂತೆ ಮಾಡಬೇಡಿ ಎಂದು ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ಸೂಚಿಸಿದ್ದಾರೆ.
ಅವರು ಗುರುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಮಾಹಿತಿ ಆಯೋಗದಲ್ಲಿ ದಾಖಲಾಗಿರುವ ಉಡುಪಿ ಜಿಲ್ಲೆಯ ಪ್ರಕರಣಗಳ ಕುರಿತು ವಿಚಾರಣೆ ನಡೆಸಿ ಮಾತನಾಡಿದರು.
ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸುವವರಿಗೆ, ತಮ್ಮ ಕಚೇರಿಯಲ್ಲಿ ಲಭ್ಯವಿರುವ ಸ್ಪಷ್ಟ ಮಾಹಿತಿಯನ್ನು ನೀಡಿ, ಒಂದು ವೇಳೆ ನಿಮ್ಮಲ್ಲಿ ಕೋರಿರುವ ಮಾಹಿತಿ ಇಲ್ಲವಾದಲ್ಲಿ ನಿಗಧಿತ ಅವಧಿಯೊಳಗೆ ಹಿಂಬರಹ ನೀಡಿ, ಪ್ರಕರಣವನ್ನು ಮುಕ್ತಾಯಗೊಳಿಸಿ, ಅರ್ಜಿದಾರರಿಗೆ ಅನಾವಶ್ಯಕವಾಗಿ ಪದೇ ಪದೇ ಕಚೇರಿಗೆ ಬರುವಂತೆ ಮಾಡಬೇಡಿ, ಅರ್ಜಿಯನ್ನು ತಿರಸ್ಕರಿಸುವುದಿದ್ದರೆ ಸೂಕ್ತ ಕಾರಣ ನೀಡಿ, ಸಂಬಂದಪಟ್ಟ ಸೆಕ್ಷನ್ಗಳನ್ನು ಉಲ್ಲೇಖಿಸಿ ತಿರಸ್ಕರಿಸಿ, ಅರ್ಜಿದಾರರಿಗೆ ಎಲ್ಲಾ ಮಾಹಿತಿಯನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಸೂಕ್ತ ಸ್ವೀಕೃತಿ ಪತ್ರದೊಂದಿಗೆ ರವಾನಿಸಬೇಕು ಎಂದು ಎನ್.ಪಿ.ರಮೇಶ್ ಹೇಳಿದರು.
ಮಾಹಿತಿ ಆಯೋಗದಲ್ಲಿ ದಾಖಲಾಗಿರುವ ಉಡುಪಿ ಜಿಲ್ಲೆಗೆ ಸಂಬಂದಪಟ್ಟ 56 ಪ್ರಕರಣಗಳಿಗೆ ಸಂಬಂದಪಟ್ಟಂತೆ ಅರ್ಜಿದಾರರು ಮತ್ತು ಅಧಿಕಾರಿಗಳ ವಿಚಾರಣೆಯನ್ನು ರಾಜ್ಯ ಮಾಹಿತಿ ಆಯುಕ್ತರು ನಡೆಸಿದರು.