KARNATAKA
ಯುವತಿಯರ ಚುಡಾಸಿದ್ದಕ್ಕೆ ಬಸ್ ನಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿತ

ಕೋಲಾರ: ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ. ಬಳಿಕ ಹಲ್ಲೆ ನಡೆಸಿದವರ ಮೇಲೆ ಮತ್ತೊಂದು ಗುಂಪು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಇದೀಗ ಬಸ್ ನಲ್ಲಿ ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಯುವಕರ ಗುಂಪು ಬಾಬುಗೆ ಮನಬಂದಂತೆ ಥಳಿಸಿದೆ. ಯುವಕರಾದ ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಗುಂಪಿಂದ ಹಲ್ಲೆಯಾಗಿದೆ. ಬಾಬು ಹಾಗೂ ಮತ್ತೊಬ್ಬ ಯುವಕ ತಾಡಿಗೋಳ್ ಗ್ರಾಮದ ಯುವತಿಯರನ್ನು ಚುಡಾಯಿಸುತ್ತಿದ್ದರು. ಚುಡಾಯಿಸಬೇಡ ಎಂದು ಎಚ್ಚರಿಕೆ ನೀಡಿದ್ದರು, ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಯುವಕರು ಧರ್ಮದೇಟು ನೀಡಿದ್ದಾರೆ. ಬಾಬು ಹಿಂಬದಿಯ ಸೀಟ್ ನಲ್ಲಿದ್ದ ಓರ್ವ ಯುವತಿ ಹಾಗೂ ಯುವಕನಿಗೂ ಏಟು ಬಿದ್ದಿವೆ. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆ ನಡೆದ ಬಳಿಕ ಇಂದು ಬಾಬು ಕಡೆಯವರಿಂದ ಹಲ್ಲೆ ಮಾಡಿದ್ದವರ ಮೇಲೆ ದೊಣ್ಣೆಗಳಿಂದ ಪ್ರತಿದಾಳಿ ನಡೆದಿದೆ.

ತಾಡಿಗೋಳ್ ಬಳಿ ಯುವತಿ ಬಸ್ ನಲ್ಲಿ ತೆರಳುತ್ತಿದ್ದಾಗ ಕೆಳಗಿಸಿ, ಸ್ತಳಕ್ಕೆ ಹಲ್ಲೆ ಮಾಡಿದ್ದವರನ್ನ ಬರಹೇಳುವಂತೆ ಪಟ್ಟು ಹಿಡಿದಿದ್ದ ಬಾಬು ಕಡೆಯವರು ಯುವತಿ ಕಡೆಯವರು ಬರ್ತಿದ್ದಂತೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಗೌನಿಪಲ್ಲಿ ಮತ್ತು ಕೊಂಡಾಮರಿ ಗ್ರಾಮದಿಂದ ಪ್ರತಿದಾಳಿ ನಡೆಸಲು ಆಗಮಿಸಿದ್ದ 60 ಹೆಚ್ಚು ಜನರು ಯುವತಿ ತಂದೆ ಮಂಜುನಾಥ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.