LATEST NEWS
ಯ್ಯೂಟೂಬ್ ನಿಂದಾಗಿ ಸ್ನೇಹಿತರನ್ನು ಕಳೆದುಕೊಂಡೆ ಎಂದು ನೇಣಿಗೆ ಶರಣಾದ ಬಾಲಕಿ

ಕೇರಳ: ಅತಿಯಾಗಿ ಯ್ಯೂಟ್ಯೂಬ್ ವೀಕ್ಷಿಸುತ್ತಿದ್ದ ಬಾಲಕಿಯೊಬ್ಬಳು ತನಗೆ ಯಾರೂ ಸ್ನೇಹಿತರಿಲ್ಲ ಮೊಬೈಲ್ ನಿಂದಾಗಿ ನಾನು ಬದುಕಿದ್ದು ಪ್ರಯೋಜನ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು 16 ವರ್ಷ ವಯಸ್ಸಿನ ಬಾಲಕಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.
ಈ ಘಟನೆ ಕೇರಳದ ಕಲ್ಲಂಬಲಮ್‌ನಲ್ಲಿ ನಡೆದಿದೆ. 10ನೇ ತರಗತಿಯ ವರೆಗೆ ಓದಿನಲ್ಲಿ ಮುಂದಿದ್ದ ಬಾಲಕಿ ಬಳಿಕ ತಾಯಿಯ ಮೊಬೈಲ್ ನಲ್ಲಿ ಯ್ಯೂಟೂಬ್ ಅಬ್ಯಾಸ ಮಾಡಿಕೊಂಡಿದ್ದಳು, ಸದಾ ಸ್ಮಾರ್ಟ್‌ಫೋನ್‌ನಲ್ಲಿ ಸದಾ ಕೊರಿಯನ್ ಬ್ಯಾಂಡ್‌ಗಳ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದ ಆಕೆಗೆ ಅದೇ ಚಟವಾಗಿ, ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದಳು. ಅಲ್ಲದೆ ಈಕೆ ಈ ಚಟದಿಂದಾಗಿ ಆಕೆಯ ಸ್ನೇಹಿತರೆಲ್ಲರೂ ದೂರ ಸರಿದಿದ್ದು, ಇದು ಆಕೆಗೆ ಆಘಾತ ಉಂಟು ಮಾಡಿತ್ತು, ಒಂದು ಹಂತದಲ್ಲಿ ಬಾಲಕಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದಿದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಅಂದುಕೊಂಡ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ಬಾಲಕಿ, ‘ನನಗೆ ಯಾರೂ ಸ್ನೇಹಿತರು ಇಲ್ಲ. ಇದಕ್ಕೆ ನನ್ನ ಮೊಬೈಲ್ ಗೀಳೇ ಕಾರಣವಾಗಿದೆ. ಮೊಬೈಲ್ನಲ್ಲಿ ಕೊರಿಯನ್ ಬ್ಯಾಂಡ್‌ಗಳ ಯೂಟ್ಯೂಬ್ ವಿಡಿಯೋ ನೋಡಿ ನೋಡಿ ಇದಕ್ಕೆ ಅಂಟಿಕೊಂಡು ಬಿಟ್ಟೆ. ಸ್ನೇಹಿತರನ್ನು ಕಳೆದುಕೊಂಡೆ. ಪರೀಕ್ಷೆಯಲ್ಲಿಯೂ ಕಡಿಮೆ ಅಂಕ ಬಂದಿವೆ. ಇನ್ನು ಬದುಕಿದ್ದು ಪ್ರಯೋಜನ ಇಲ್ಲ’ ಎಂದು ಉಲ್ಲೇಖಿಸಿದ್ದಾಳೆ.