LATEST NEWS
ಮಂಗಳೂರು – ಮನೆಯ ಶೌಚಾಲಯದೊಳಗೆ ಮೃತಪಟ್ಟ ಬಾಲಕಿ

ಮಂಗಳೂರು ಜನವರಿ 29: ಮನೆಯೊಂದರ ವಾಶ್ ರೂಂನಲ್ಲಿ 16 ವರ್ಷದ ಬಾಲಕಿ ನಿಗೂಢ ರೀತಿಯಲ್ಲಿ ಮೃಪಟ್ಟಿರುವ ಘಟನೆ ಇರುವ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಐಮನ್ ಆರ್ಕೇಡ್ ನಡೆದಿದೆ.
ಬಾಲಕಿಯನ್ನು ತಾಲೂಕಿನ ಕಾಣಿಯೂರು ಗ್ರಾಮದ ಕಜೆ ಮನೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರಿ ಅಫೀಫಾ ಎಂದು ಗುರುತಿಸಲಾಗಿದೆ. ಬಾಲಕಿ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಇದು ಹೃದಯ ಸ್ತಂಭನ ಎಂದು ಶಂಕಿಸಲಾಗಿದೆ.
ಬಾಲಕಿ ಹಾಗೂ ಆಕೆಯ ತಂದೆ ಶನಿವಾರ ಮನೆಯಿಂದ ಗೇರುಕಟ್ಟೆ ಶಾಲೆಗೆ ತೆರಳಿದ್ದರು. ನಂತರ ಆಕೆಯ ತಂದೆ ಆಕೆಯನ್ನು ಕುಪ್ಪೆಟ್ಟಿಯಲ್ಲಿ ಬಿಟ್ಟು ಮಂಗಳೂರಿಗೆ ತೆರಳಿದ್ದರು.

ನಂತರ ಶಾಲೆಯ ಬಳಿ ಇರುವ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಐಮನ್ ಆರ್ಕೇಡ್‌ನಲ್ಲಿರುವ ಮನೆಯೊಂದರಲ್ಲಿ ವಾಶ್ ರೂಂ ಬಳಸಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ಕಿಟಕಿಯ ಮೂಲಕ ನೋಡಿದಾಗ ಆಕೆ ನೆಲದ ಮೇಲೆ ಮಲಗಿರುವುದನ್ನು ಕಂಡಿದ್ದಾರೆ. ತಕ್ಷಣ ಬಾಗಿಲು ಒಡೆದು ಬಾಲಕಿಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.