DAKSHINA KANNADA
ಜೀಪಿಗೆ ಹಿಡಿತೆಯೇ ದೆವ್ವಾ, ಏನಿದು ಮಾಯೆ ದೇವಾ
ಜೀಪಿಗೆ ಹಿಡಿತೆಯೇ ದೆವ್ವಾ, ಏನಿದು ಮಾಯೆ ದೇವಾ
ಪುತ್ತೂರು, ಜೂನ್ 8: ಏರು ರಸ್ತೆಯಲ್ಲಿ ನಿಲ್ಲಿಸಿದ ಜೀಪೊಂದು ಅಚಾನಕ್ಕಾಗಿ ಚಲಿಸಿ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.
ಜೂನ್ 3 ರಂದು ನಡೆದ ಈ ಘಟನೆಯ ಸಿ.ಸಿ.ಕ್ಯಾಮರಾ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುತ್ತೂರಿನ ವಿಜಯಾ ಶಾಮಿಯಾನ ಅಂಗಡಿಗೆ ಸೇರಿದ ಈ ಜೀಪನ್ನು ಅಂಗಡಿಯ ಮುಂಭಾಗದಲ್ಲೇ ಹೆಚ್ಚಾಗಿ ಪಾರ್ಕ್ ಮಾಡಲಾಗುತ್ತಿತ್ತು.
ಎಂದಿನಂತೆ ಪಾರ್ಕ್ ಮಾಡಲಾಗಿದ್ದ ಜೀಪು ಜೂನ್ 3 ರಂದು ಏಕಾಏಕಿ ಮುಂದಕ್ಕೆ ಸಾಗಿ ಬಾಲಕನೊಬ್ಬನಿಗೆ ಹೊಡೆದಿದೆ.
ಸಾಮಾನ್ಯವಾಗಿ ಇಳಿಜಾರು ಪ್ರದೇಶದಲ್ಲಿ ನಿಂತಿರುವ ವಾಹನಗಳು ಮುಂದಕ್ಕೋ ಅಥವಾ ಹಿಮ್ಮುಖವಾಗಿಯೋ ಚಲಿಸುತ್ತದೆ.
ಆದರೆ ಇಲ್ಲಿ ಮಾತ್ರ ಜೀಪು ಏರು ರಸ್ತೆಯಲ್ಲೇ ಸಾಗಿ ಬಂದು ಎದುರಿಗಿದ್ದ ಕಾರಿಗೆ ಹಾಗೂ ಬಾಲಕನಿಗೆ ಹೊಡೆದಿದೆ.
ಏಕಾಏಕಿ ಜೀಪು ಸ್ಟಾರ್ಟ್ ಆಗಿ, ಮುಂದಕ್ಕೆ ಸಾಗಬೇಕಾದರೆ ಕಾರಣ ಏನು ಎನ್ನುವ ಗೊಂದಲದಲ್ಲಿ ಈ ದೃಶ್ಯದ ವೀಕ್ಷಕರಿದ್ದಾರೆ.
ಜೀಪಿಗೆ ದೆವ್ವ ಹಿಡಿಯಿತೋ ಎನ್ನುವ ಆಶ್ವರ್ಯದ ಕಮೆಂಟ್ ಗಳೂ ಇದೀಗ ಬರಲಾರಂಭಿಸಿದೆ.
Video