Connect with us

  LATEST NEWS

  ಜೆರೋಸಾ ಶಾಲೆ ಪ್ರಕರಣದಲ್ಲಿ ಶಿಕ್ಷಣ ಇಲಾಖೆಯಿಂದ ತಪ್ಪಾಗಿದೆ – ರಮಾನಾಥ ರೈ

  ಮಂಗಳೂರು ಫೆಬ್ರವರಿ 13: ಅಯೋಧ್ಯೆ ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪದ ಮೇಲೆ ಗೊಂದಲಕ್ಕೆ ಕಾರಣವಾಗಿದ್ದ ಸಂತ ಜೆರೋಸಾ ಶಾಲೆಗೆ ಇಂದು ಕಾಂಗ್ರೇಸ್ ಮುಖಂಡರ ನಿಯೋಗ ಭೇಟಿ ನೀಡಿದೆ. ಪ್ರಕರಣದ ಕುರಿತು ತನಿಖೆ ನಡೆಸಲು ಸತ್ಯಶೋಧನ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ರಮಾನಾಥ ರೈ ಒತ್ತಾಯಿಸಿದ್ದಾರೆ.


  ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ. ಬಳಿಕ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗ್ಗೆ ಆರೋಪ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ ಎಂದರು. ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು ಎಂದರು. ಕ್ರೈಸ್ತ ಆಡಳಿತ ಮಂಡಳಿ ಇದೆ, ಆದರೆ ಸಮಸ್ಯೆ ಸರಿಪಡಿಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗುತ್ತದೆ. ಪರಿಶುದ್ಧವಾದ ಮಕ್ಕಳ ನಿಷ್ಕಲ್ಮಷ ಮನಸ್ಸನ್ನು ಪ್ರಚೋದನೆ ಮಾಡಿ ಬಳಸಬಾರದು. ಯಾರು ಬೇಕಾದರೂ ಮಾತನಾಡಲಿ, ಆದರೆ ಶಾಲೆಯ ಮಕ್ಕಳ ಬಳಕೆ ಬೇಡ ಎಂದರು. ಪ್ರಕರಣ ಸಂಬಂಧ ಸರ್ಕಾರದ ಕಡೆಯಿಂದ ತನಿಖೆ ಆಗಿ ಸೂಕ್ತ ಕ್ರಮ ಆಗಬೇಕು. ಸದ್ಯ ಪ್ರಾಥಮಿಕ ಹಂತದಲ್ಲಿದೆ, ಯಾವುದೇ ಗಲಾಟೆ ಆಗಬಾರದು ಅಷ್ಟೇ. ಮುಂದೆ ಸಾಮರಸ್ಯದ ರೀತಿಯಲ್ಲಿ ಇದನ್ನ ಮುಗಿಸಬೇಕು. ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಇಲಾಖೆ ಸ್ವತಂತ್ರ ತನಿಖೆ ಮಾಡಬೇಕು. ಅಧಿಕಾರಿಗಳು ಉಲ್ಪಣವಾದ ಬಳಿಕ ಒತ್ತಡದ ಮೇಲೆ ಬಂದಿದ್ದಾರೆ ಎಂದರು. ಶಿಕ್ಷಣ ಇಲಾಖೆ ಯಾವುದೇ ಪ್ರಚೋದನೆಗೆ ಒಳಗಾಗದೇ ತನಿಖೆ ನಡೆಸಲಿ. ಮಕ್ಕಳನ್ನ ರಾಜಕೀಯಕ್ಕೆ ಬಳಸಬಾರದು, ಅದರ ಬಗ್ಗೆಯೂ ತನಿಖೆ ಆಗಲಿ. ಮಕ್ಕಳನ್ನು ದುರುಪಯೋಗ ಪಡಿಸಿಕೊಂಡಿದ್ದರೆ ಅದರ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ತನಿಖೆ ಮಾಡಲಿ. ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಸ್ವಲ್ಪ ತಪ್ಪಾಗಿದೆ ಎಂದರು.


  ಜೆರೋಸಾ ಶಾಲೆ ಬಳಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾವು ಭೇಟಿಯಾಗಿದ್ದೇವೆ. ಸಂಬಂಧ ಪಟ್ಟ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡುತ್ತೇವೆ. ಎಲ್ಲವೂ ತನಿಖೆ ಆಗಲಿ, ಸರ್ಕಾರ ಸ್ವತಂತ್ರ ತನಿಖೆ ನಡೆಯಲಿ. ಶಾಲಾ ಆಡಳಿತ ಮಂಡಳಿ ಶಿಕ್ಷಣ ಇಲಾಖೆಗೆ ತನಿಖೆ ‌ನಡೆಸಲು ಬಿಟ್ಟಿದ್ದಾರೆ. ಆದರೆ‌ ಅದರ ಮಧ್ಯೆ ಇದೆಲ್ಲಾ ಇಲ್ಲಿ ಆಗಿ ಹೋಗಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply