Connect with us

    LATEST NEWS

    ಗೌರಿ ಲಂಕೇಶ್ ಹತ್ಯೆ – ಟ್ವಿಸ್ಟ್ ನೀಡಿದ ಟ್ವೀಟ್….

    ಮಂಗಳೂರು ಸೆಪ್ಟೆಂಬರ್ 6 : ವಿಚಾರವಾದಿ, ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ಧಿಯಲ್ಲಿದ್ದ ಪತ್ರಕರ್ತೆ, ಲೇಖಕಿ ಗೌರಿ ಲಂಕೇಶ್ ಹತ್ಯೆ ಇದೀಗ ದೇಶದ ಗಮನವನ್ನು ರಾಜ್ಯದೆಡೆಗೆ ತರುವಂತೆ ಮಾಡಿದೆ. ವಿಚಾರವಾದಿ ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ಎರಡು ವರ್ಷ ಕಳೆದಿದೆ. ಆದರೆ ಇಂದಿನವರೆಗೂ ಆರೋಪಿಗಳನ್ನು ಪತ್ತೆಹಚ್ಚಲಾಗಿಲ್ಲ. ಅದರ ನಡುವೆ ಇದೀಗ ಮತ್ತೊಂದು ವಿಚಾರವಾದಿಯ ಕೊಲೆಯಾಗಿದೆ.

    ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ತನ್ನ ಬರವಣಿಗೆ ಹಾಗೂ ಮಾತಿನಲ್ಲಿ ಬಲಪಂಥೀಯ ವಿಚಾರಧಾರೆಗಳನ್ನು ನಿರಂತರವಾಗಿ ಟೀಕಿಸಿಕೊಂಡು ಬಂದವರು. ಹಿಂದೂ ಧರ್ಮ, ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಮೂಲಕವೂ ಅವರು ಕೆಲ ಹಿಂದೂ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದು ಲೋಕಕ್ಕೂ ತಿಳಿದ ವಿಚಾರ.
    ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳಲು ಗೌರಿ ಲಂಕೇಶ್ ಮಂಗಳೂರಿಗೆ ಬಂದಿದ್ದ ಸಮಯದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎನ್ನುವ ಆರೋಪದ ಮೇಲೆ ಅವರ ವಿರುದ್ಧ ಮಂಗಳೂರು ಪೋಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಇದೇ ಕಾರಣಕ್ಕಾಗಿಯೇ ಗೌರಿ ಹತ್ಯೆಯ ಹಿಂದೆ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎನ್ನುವ ಆರೋಪ ಪ್ರಗತಿಪರ ಒಕ್ಕೂಟಗಳಿಂದ ಕೇಳಿ ಬರಲಾರಂಭಿಸಿದೆ.

    ಆದರೆ ತನ್ನದೇ ಸಿದ್ಧಾಂತದ ಜೊತೆಗಿನ ವೈಮನಸ್ಸು ಗೌರಿ ಹತ್ಯೆಗೆ ಕಾರಣವಾಯಿತೇ ಎನ್ನುವ ಸಂಶಯವೊಂದು ಹುಟ್ಟಿಕೊಂಡಿದೆ. ಗೌರಿ ಲಂಕೇಶ್ ತನ್ನ ಟ್ವೀಟರ್ ಖಾತೆಯಲ್ಲಿ ಯಾವುದೋ ವಿಷಯವೊಂದಕ್ಕೆ ಸಂಬಂಧಿಸಿ ಕ್ಷಮೆಯನ್ನು ಕೋರುವಂತಹ ಮೆಸೇಜ್ ಮಾಡಿದ್ದಾರೆ. ಅಲ್ಲದೆ ತನ್ನ ಖಾತೆಯ ಹಿಂಬಾಲಕರಲ್ಲಿ ಆ ವಿಷಯದ ಬಗ್ಗೆ ಚರ್ಚೆ ಬೇಡ, ಅದನ್ನು ಇಲ್ಲಿಗೇ ಮುಗಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ನಾವು ನಾವು ನಮ್ಮ ತಪ್ಪನ್ನು ಎಕ್ಸಪೋಸ್ ಮಾಡೋದು ಬೇಡ ಎನ್ನುವ ರೀತಿಯಲ್ಲಿ ವಿಚಾರವೊಂದನ್ನು ತಣ್ಣಗಾಗಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.


    ಅಂದರೆ ಗೌರಿ ಲಂಕೇಶ್ ಹತ್ಯೆಗೆ ಮೊದಲು ಅವರದೇ ಬಳಗದ ಕೆಲವು ವ್ಯಕ್ತಿಗಳೊಂದಿಗೆ ಮನಸ್ತಾಪ ಹೊಂದಿದ್ದರು ಎನ್ನುವ ವಿಚಾರ ಸ್ಪಷ್ಟವಾಗುತ್ತಿದೆ. ಬಲಪಂಥೀಯ ವಿಚಾರಧಾರೆಗಳ ವಿರೋಧಿಯಾಗಿರುವ ಲಂಕೇಶ್ ಅವರ ಮೇಲೆ ಯಾವ ಹಲ್ಲೆಯಾದರೂ ಅದನ್ನು ಬಲಪಂಥೀಯರ ಹೆಗಲ ಮೇಲೆ ಹೊರಿಸಬಹುದು ಎನ್ನುವ ಷಡ್ಯಂತ್ರವೂ ಈ ಹತ್ಯೆಯ ಹಿಂದಿರುವ ಸಾಧ್ಯತೆಯೂ ಇದೆ.
    ಹತ್ಯೆ ನಡೆಸಿದ್ದು ಯಾರೇ ಆಗಿದ್ದರೂ ಅದು ಖಂಡನೀಯ. ತನಿಖೆಗೆ ಮೊದಲೇ ತನಿಖೆಯ ದಿಕ್ಕನ್ನು ಬದಲಿಸುವ ಕೆಲವು ಸಂಘಟನೆಗಳ ಹಾಗೂ ವ್ಯಕ್ತಿಗಳ ಮೇಲೂ ಪೋಲೀಸ್ ಇಲಾಖೆ ನಿಗಾವಹಿಸುವ ಅಗತ್ಯವಿದೆ. ಪೋಲೀಸ್ ಇಲಾಖೆ ಗೌರಿ ಲಂಕೇಶ್ ಹತ್ಯೆಯನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಬೇಕಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಗೌರಿ ಲಂಕೇಶ್ ಟ್ವೀಟ್

    Share Information
    Advertisement
    Click to comment

    You must be logged in to post a comment Login

    Leave a Reply