LATEST NEWS
ಜೆಪ್ಪು ಮಾರ್ಕೆಟ್ ಬಳಿ ನಡು ರಸ್ತೆಯಲ್ಲೇ ಸ್ಪೋಟಗೊಂಡ ಗ್ಯಾಸ್ ಸಿಲಿಂಡರ್…!!

ಜೆಪ್ಪು ಮಾರ್ಕೆಟ್ ಬಳಿ ನಡು ರಸ್ತೆಯಲ್ಲೇ ಸ್ಪೋಟಗೊಂಡ ಗ್ಯಾಸ್ ಸಿಲಿಂಡರ್…!!
ಮಂಗಳೂರು ಮೇ.29: ನಡು ರಸ್ತೆಯಲ್ಲೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಮಂಗಳೂರಿನ ಜೆಪ್ಪು ಮಾರ್ಕೆಟ್ ಬಳಿ ನಡೆದಿದೆ. ಗ್ಯಾಸ್ ಸಿಲಿಂಡರ್ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದರೂ ಜನ ಅದರ ಹತ್ತಿರವೇ ದ್ವಿಚಕ್ರ ವಾಹನ ಹಾಗೂ ಜನರು ನಿಂತಿರುವುದು ಆತಂಕಕ್ಕೀಡು ಮಾಡಿತ್ತು.
ಮಂಗಳೂರಿನ ಜೆಪ್ಪು ಮಾರ್ಕೆಟ್ ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಲೀಕ್ ಆಗಿದ್ದ ಗ್ಯಾಸ್ ಸಿಲಿಂಡರನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಸಿಲಿಂಡರ್ 50 ಮೀಟರ್ ಎತ್ತರಕ್ಕೆ ಚಿಮ್ಮಿದೆ. ಅದೃಷ್ಟವಶಾತ್ ಯಾರಿಗೂ ಗಾಯ ಸಂಭವಿಸಿಲ್ಲ. ಸಿಲಿಂಡರ್ ನಲ್ಲಿ ಬೆಂಕಿಯಿದ್ದರೂ ಸಿಲಿಂಡರ್ ಪಕ್ಕವೇ ಜನ ನಿಂತಿದ್ದರು. ಅಲ್ಲದೆ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದು, ಕೆಲ ಕಾಲ ಆತಂಕಕ್ಕೀಡುಮಾಡಿದೆ