Connect with us

LATEST NEWS

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ ಒಂದೇ ದಿನ 24 ಜನರಿಗೆ ಕೊರೋನಾ ಪಾಸಿಟಿವ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ ಒಂದೇ ದಿನ 24 ಜನರಿಗೆ ಕೊರೋನಾ ಪಾಸಿಟಿವ್

ಮಂಗಳೂರು ಮೇ.28: ಉಡುಪಿ ನಂತರ ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕೊರೊನಾ ನಂಟು ಭಾರಿ ಆಘಾತವನ್ನೆ ಉಂಟು ಮಾಡಿದ್ದು, ಕೊರೊನಾ ಪ್ರಕರಣಗಳಲ್ಲಿ ಜಿರೋದಲ್ಲಿದ್ದ ಉಡುಪಿಯನ್ನು ಶತಕದತ್ತ ತಂದಿಟ್ಟ ಮಹಾರಾಷ್ಟ್ರ ಕೊರೊನಾ ನಂಟು, ಇಂದು ದಕ್ಷಿಣಕನ್ನ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಇಂದು ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 24 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಇಂದು ಸಂಜೆ ಬಂದ ಹೆಲ್ತ್ ಬುಲೆಟಿನ್ ನಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ 18 ಪ್ರಕರಣಗಳು ದಾಖಲಾಗಿವೆ. ಸಂಜೆ ದಾಖಲಾದ 18 ಕೊರೊನಾ ಪ್ರಕರಣಗಳು ಎಲ್ಲವೂ ಮಹಾರಾಷ್ಟ್ರದಿಂದ ಬಂದವರಿಗೆ ಸೊಂಕು ತಗುಲಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರು.
ಇಂದು ಒಟ್ಟು ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 24 ಆಗಿದ್ದು ಅದರಲ್ಲಿ 23 ಮಹಾರಾಷ್ಟ್ರ ಸಂಪರ್ಕದಿಂದ ಬಂದಿದ್ದು, ಒಂದು ಕೇರಳದಿಂದ ಬಂದವರಿಗೆ ಸೊಂಕು ತಗುಲಿದೆ.

Facebook Comments

comments