LATEST NEWS
ಗ್ಯಾರೆಜ್ ಮೆಕ್ಯಾನಿಕ್ ಗಳ ಅವಹೇಳನ – ಝೀ ಕನ್ನಡದ ಮಹಾನಟಿ ಕಾರ್ಯಕ್ರಮದ ವಿರುದ್ದ ಹೋರಾಟದ ಎಚ್ಚರಿಕೆ
ಮಂಗಳೂರು ಮೇ 08: ಝೀ ಕನ್ನಡ ಮಹಾನಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಗ್ಯಾರೆಜ್ ಮೆಕ್ಯಾನಿಕ್ ಗಳ ಅವಹೇಳನ ಮಾಡಿರುವುದರ ವಿರುದ್ದ ದಕ್ಷಿಣಕನ್ನಡ ಗ್ಯಾರೆಜ್ ಮಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ಆಯೋಜಕರು ಬಹಿರಂಗವಾಗಿ ಕ್ಷಮೇ ಕೆಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಗ್ಯಾರೆಜ್ ಮಾಲಕರ ಸಂಘದ ಮುಖಂಡರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳನ ಮಾಡಿ ಮಾತನಾಡಿದ್ದು ನೋಡಿ ತುಂಬಾ ಬೇಸರವಾಗಿದೆ. ಮೆಕ್ಯಾನಿಕ್‌ಗಳ ಜೊತೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದಾಗ ತೀರ್ಪುಗಾರರು ತಿಳ್ಳೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ, ತಮಾಷೆಗೂ ಕೂಡ ಒಂದು ಇತಿ ಮಿತಿ ಇರಬೇಕು. ಇಂತಾಹ ಅಹಂಕಾರದ ತಮಾಷೆ ಶೋಕಿಗಳ ಟಿ.ಆರ್.ಪಿ ಹೆಚ್ಚಿಸಬಹುದೇ ವಿನಹಃ ಪ್ರೇಕ್ಷಕರ ಮನಸ್ಸು ಗೆಲ್ಲಲಾಗದು.
ಇದೇ ಶಿಳ್ಳೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ ತೀರ್ಪುಗಾರರು, ನಿರೂಪಕಿ, ಪರಿಸ್ಥಿತಿ ಒಮ್ಮೆ ಊಹಿಸಿ ನೋಡಲಿ ಇವರ ವಾಹನ ಕೆಟ್ಟು ನಿಂತಾಗ ಗ್ರೀಸ್ ತಿನ್ನುವ ಮೆಕ್ಯಾನಿಕ್‌ಗಳೇ ಸರಿ ಮಾಡುವುದು ವಿನಹ ಮತ್ತಾರು ಅಲ್ಲ. ಮೆಕ್ಯಾನಿಕ್‌ಗಳಿಲ್ಲದಿದ್ದರೆ ಜನರ ಪರಿಸ್ಥಿತಿ ಕೇವಲ ಊಹಿಸಿದಾಗಲೇ ತಿಳಿಯಬಹುದು. ಮೆಕ್ಯಾನಿಕ್ಗಳು ಶ್ರಮ ಪಟ್ಟು ದುಡಿದು ತಿನ್ನುವ ಶ್ರಮ ಜೀವಿಗಳು. ಅಂಥವರ ಬಗ್ಗೆ ಈ ರೀತಿ ಅವಹೇಳನ ಮಾಡುವುದು ಘನತೆಗೆ ತಕ್ಕದ್ದಲ್ಲ. ಗ್ರೀಸ್ ತಿನ್ನುವ ಬಗ್ಗೆ ಯಾವ ಆಧಾರದ ಮೇಲೆ ತಮಾಷೆ ಮಾಡಿದ್ದು ಈ ಹೇಳಿಕೆ ನೀಡಿದ ಯುವತಿ, ಆಯೋಜಕರು, ತೀರ್ಪುಗಾರರು, ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.