ಪರಂಗಿಪೇಟೆ ಗ್ಯಾಂಗ್ ವಾರ್ ಗೆ ಇಬ್ಬರು ಬಲಿ
ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನಲ್ಲಿ ತಡ ರಾತ್ರಿ ಗ್ಯಾಂಗ್ ವಾರ ನಡೆದು ಇಬ್ಬರ ಬಲಿ ಪಡೆದಿದೆ. ಮಂಗಳೂರು ಹೊರವಲಯದ ಬಂಟ್ವಾಳದ ಫರಂಗಿಪೇಟೆಯ ಗಾರ್ಡನ್ ಹೋಟೆಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
Table Of Content
ಮೃತರನ್ನು ಮಂಗಳೂರು ಹೊರವಲಯದ ಅಡ್ಯಾರ್ ನಿವಾಸಿ ಝಿಯಾ ಹಾಗೂ ಫಯಾಝ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅನಿಸ್, ಮುಶ್ತಾಕ್ , ಫಝಲ್ ಎಂಬವರು ಗಂಭಿರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದಿದ್ದು
ಕಳೆದ ರಾತ್ರಿ ಝಿಯಾ ಹಾಗು ಫಯಾಝ್ ಸೇರಿದಂತೆ 5 ಜನರ ತಂಡ ಸ್ವಿಫ್ಟ್ ಕಾರಿನಲ್ಲಿ ಫರಂಗಿಪೇಟೆಯ ಗಾರ್ಡನ್ ಹೋಟೆಲ್ ನತ್ತ ಬಂದಿದೆ . ಈ ಕಾರನ್ನು ಹಿಂಬಾಲಿಸಿಕೊಂಡು ಬಂದ ಇನ್ನೋವಾ ಕಾರಿನಲ್ಲಿದ್ದ ದುಷ್ಕರ್ಮಿಗಳ ತಂಡ ಸ್ವಿಫ್ಟ್ ಕಾರಿನಲ್ಲಿದ್ದವರ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ .

ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫಯಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಝಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ .
ರೌಡಿಗಳ ಗ್ಯಾಂಗ್ ವಾರ್
ಮೃತಪಟ್ಟ ಇಬ್ಬರು ರೌಡಿ ಶೀಟರ್ ಗಳಾಗಿದ್ದು ದಾಳಿ ನಡೆಸಿದವರು ಸ್ಥಳೀಯ ವಿರೋಧಿ ಗುಂಪಿನ ರೌಡಿಗಳೇ ಎಂದು ಹೇಳಲಾಗಿದೆ .ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ .
