LATEST NEWS
ಕುಖ್ಯಾತ ಭೂಗತ ಪಾತಕಿ ಪ್ರಸಾದ್ ಪೂಜಾರಿ ಚೀನಾದಲ್ಲಿ ಬಂಧನ , ಭಾರತಕ್ಕೆ ಗಡಿಪಾರು..!!
ಮುಂಬಯಿ : ಕುಖ್ಯಾತ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಚೀನಾದ ಹಾಂಕಾಂಗ್ ನಲ್ಲಿ ಪೊಲೀಸರು ಬಂಧಿಸಿದ್ದು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮೂಲತಃ ಉಡುಪಿ ಜಿಲ್ಲೆಯ ಕಾಪು ಪರಿಸರ ನಿವಾಸಿಯಾಗಿರುವ ಪ್ರಸಾದ್ ಪೂಜಾರಿ ಮೇಲೆ ಮುಂಬಯಿ ಸೇರೊಇದಂತೆ ದೇಶದ ವಿವಿಧ ಭಾಗಗಗಲ್ಲಿ ಹಲವಾರು ಕೇಸ್ ಗಳಿದ್ದು ಈತ ಕೊಲೆ,ಕೊಲೆ ಯತ್ನ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಪ್ರಸಾದ್ ಪೂಜಾರಿ ಮೊದಲು ರವಿ ಪೂಜಾರಿ ಜೊತೆಗೆ ಗುರುತಿಸಿಕೊಂಡಿದ್ದು,ನಂತರ ತನ್ನದೇ ಗ್ಯಾಂಗ್ ರಚಿಸಿಕೊಂಡು ಬೆದರಿಕೆ ಕರೆಗಳನ್ನು ಮುಂಬಯಿನಲ್ಲಿ ಮಾಡುತ್ತಿದ್ದ.
ಈತ ಚೀನಾದಲ್ಲಿ ತಲೆಮರೆಸಿಕೊಂಡು ಅಲ್ಲಿಯ ಹುಡುಗಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ.
ಇಂಟರ್ ಪೋಲ್ ನೆರವಿನಿಂದ ಮುಂಬಯಿ ಪೊಲೀಸರ ಮಾಹಿತಿಯಂತೆ ಚೀನಾ ಪೊಲೀಸರು ಪ್ರಸಾದ್ ಪೂಜಾರಿಯನ್ನು ಬಂಧಿಸಿ ವಿಚಾರಣೆ ನಡೆಸಿ ಬಳಿಕ ಭಾರತಕ್ಕೆ ಗಡಿಪಾರು ಮಾಡಿದ್ದಾರೆ. 2019 ರಲ್ಲಿ ಶಿವಸೇನಾ ಕಾರ್ಯಕರ್ತ ಚಂದ್ರಕಾಂತ್ ಜಾಧವ್ ಮೇಲೆ ಗುಂಡು ಹಾರಿಸಿದ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದ.
ಅವರ ಇಡೀ ಗ್ಯಾಂಗನ್ನು ಮುಂಬೈ ಕ್ರೈಂ ಬ್ರಾಂಚ್ ವಿಭಾಗ ನಿರ್ಮೂಲನೆ ಮಾಡಿತ್ತು ಮತ್ತು ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲಾಯಿತು. 2019 ರಲ್ಲಿ ಹಾಂಗ್ ಕಾಂಗ್ ನಲ್ಲಿ ಬಂಧನವಾಗಿದ್ದರೂ ಪೂಜಾರಿ ಚೀನಾದ ಮಹಿಳೆಯನ್ನು ಮದುವೆಯಾಗಿದ್ದು ಗಡಿಪಾರಿಗೆ ತೊಡಕಾಗಿತ್ತು. ಮುಂಬೈ ಪೊಲೀಸರ ನಿರಂತರ ಪ್ರಯತ್ನಗಳ ಫಲವಾಗಿ ಇದೀಗ ಸಾಧ್ಯವಾಗಿದೆ. ಚೀನಾ ಪ್ರಸಾದ್ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಿದೆ. 20 ವರ್ಷಗಳ ನಂತರ ಇಂದು ಅವರನ್ನು ಮತ್ತೆ ಮುಂಬೈಗೆ ಕರೆತರಲಾಗುತ್ತದೆ.