LATEST NEWS
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಜಟಾಪಟಿ
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಜಟಾಪಟಿ
ಉಡುಪಿ ಮೇ.08: ಉಡುಪಿಯ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಸಣ್ಣ ಜಟಾಪಟಿ ನಡೆದಿದೆ. ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಪರ್ಷಿಯನ್ ಮಾದರಿಯ 8 ಬೋಟುಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಿಂದ ಗಂಗೊಳ್ಳಿಗೆ ಬಂದಿದ್ದವು. ಅದರಲ್ಲಿ ಹೊರ ರಾಜ್ಯದ ಕಾರ್ಮಿಕರು ಇದ್ದಿದ್ದು, ಈ ಗಲಾಟೆಗೆ ಮೂಲ ಕಾರಣವಾಗಿತ್ತು.
ಕೊರೋನಾ ಲಾಕ್ ಇರುವ ಸಂದರ್ಭದಲ್ಲಿ ಬೋಟ್ ಬಂದಿರೋದರಿಂದ, ಗಂಗೊಳ್ಳಿ ಮತ್ತು ಭಟ್ಕಳದ ಮೀನುಗಾರರ ನಡುವೆ ವಾಗ್ವಾದ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಲವಾರು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನಲೆ ಉಡುಪಿಗೂ ಅದನ್ನು ಹರಿಡಿಸಬೇಡಿ ಎಂದು ಮೀನುಗಾರರು ತಗಾದೆ ತೆಗೆದಿದ್ದಾರೆ.
ಅಲ್ಲದೆ ಪರ್ಶಿಯನ್ ಬೋಟ್ ಗಳನ್ನು ಬಂದರಿನಲ್ಲಿ ಲಂಗರು ಹಾಕಲು ಇಲ್ಲಿನ ಮೀನುಗಾರರು ಅಡ್ಡಿಪಡಿಸಿದ್ದಾರೆ. ಜಗಳ ತಾರಕಕ್ಕೆ ಹೋಗುವ ಸಂದರ್ಭ ಬಂದಾಗ ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳು ಬಂದರಿಗೆ ದೌಡಾಯಿಸಿದ್ದಾರೆ. ಲಾಕ್ ಡೌನ್ ಸಂಪೂರ್ಣವಾಗಿ ತೆರವು ಆಗುವ ತನಕ ಮೀನುಗಾರಿಕೆ ಆರಂಭವಾಗುವ ತನಕ ಹೊರರಾಜ್ಯದ ಬೋಟುಗಳು ಹೊರ ಜಿಲ್ಲೆಯ ಬೋಟುಗಳು ಎಲ್ಲೂ ಸಂಚರಿಸಬಾರದು ಎಂದು ಮೀನುಗಾರರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ ಗಂಗೊಳ್ಳಿ ಬಂದರಿಗೆ ಭಟ್ಕಳದಿಂದ ಎಂಟು ಬೋಟುಗಳು ಬರ್ತಾ ಇದೆ ಅನ್ನೋ ಮಾಹಿತಿ ನನಗೆ ಬಂದಿತ್ತು. ತಕ್ಷಣ ನಾನು ಕರಾವಳಿ ಕಾವಲು ಪಡೆ ಪೊಲೀಸರಿಗೆ ಈ ಮಾಹಿತಿಯನ್ನು ಕೊಟ್ಟೆ . ಸುಮಾರು ಇಪ್ಪತ್ತು ಮಂದಿ ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಮೀನುಗಾರರು ಇರುವುದು ನಮಗೆ ಗೊತ್ತಾಗಿದೆ. ಅವರೆಲ್ಲರ ಮಾಹಿತಿಗಳನ್ನು ಕೊಂಡಿದ್ದೇವೆ ಮತ್ತು ಬೋಟ್ ಸಮೇತ ಅವರನ್ನು ವಾಪಸ್ ಕಳುಹಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡುವುದಾಗಿ ಹೇಳಿದರು .