Connect with us

  LATEST NEWS

  ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಹಬ್ಬದ ರಜೆ ನೀಡಲು ಆಗ್ರಹ

  ಮಂಗಳೂರು ಸೆಪ್ಟೆಂಬರ್ 11 : ನಾಡಿನ ಹಾಗೂ ಹಿಂದೂಗಳ ಅತ್ಯಂತ ಪ್ರಮುಖ ಹಬ್ಬವಾಗಿರುವ ಗಣೇಶ ಚತುರ್ಥಿಯು ಈ ಬಾರಿ ಸೆಪ್ಟೆಂಬರ್ 19ರಂದು ಇರುವುದರಿಂದ ಸರಕಾರಿ ರಜೆಯನ್ನು ಅಂದೇ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

  ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಪ್ರಕಟಿಸಲಾಗಿದೆ. ಆದರೆ ನಾಡಿನೆಲ್ಲೆಡೆ ಧಾರ್ಮಿಕವಾಗಿ ಸೆಪ್ಟೆಂಬರ್ 19 ರಂದು ಹಬ್ಬದ ಆಚರಣೆ ಇರುವುದರಿಂದ ಆ ದಿನವನ್ನು ಕರ್ತವ್ಯದ ದಿನ ಎಂದು ಪರಿಗಣಿಸಿದರೆ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಂತಾಗುತ್ತದೆ. ಸದಾ ಹಿಂದೂಗಳ ಹಬ್ಬದ ವಿಷಯದಲ್ಲಿ ಏಕಪಕ್ಷೀಯವಾಗಿ ವರ್ತಿಸುವ ಕಾಂಗ್ರೆಸ್ ತನ್ನ ಹಳೆಯ ಜಾಯಮಾನವನ್ನು ಬಿಟ್ಟು ಗಣೇಶ ಚತುರ್ಥಿ ರಜೆಯನ್ನು ಸೆಪ್ಟೆಂಬರ್ 19 ರಂದೇ ನೀಡಿ ಎಲ್ಲರೂ ಕುಟುಂಬದ ಜೊತೆಗೂಡಿ ಸಂಭ್ರಮದಿಂದ ಹಬ್ಬ ಆಚರಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply