DAKSHINA KANNADA
ಗಣರಾಜ್ಯೋತ್ಸವ ಪೆರೇಡ್‌ಗೆ ಪುತ್ತೂರಿನ ವಜೀದಾಬಾನು ಆಯ್ಕೆ

ಪುತ್ತೂರು ಡಿಸೆಂಬರ್ 29: ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ಪುತ್ತೂರಿನ ಡಾ. ವಜಿದಾಬಾನು ಆಯ್ಕೆಯಾಗಿದ್ದಾರೆ.
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಎನ್ಎಸ್ಎಸ್ ನಡೆಸಿದ ದಕ್ಷಿಣ ಪ್ರಾಂತೀಯ ಪ್ರೀ ಆರ್‌ಡಿ ಶಿಬಿರದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಳು ಮಂದಿಯಲ್ಲಿ ಇವರು ಒಬ್ಬರು. ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಜಿದಾಬಾನು ಅವರು ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಇಸ್ಮಾಯಿಲ್ ಮತ್ತು ಸುಫಿಯಾ ಬಾನು ದಂಪತಿಯ ಪುತ್ರಿ. ಎ.ಜೆ ದಂತ ವೈದ್ಯಕೀಯ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿದ್ದು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಆರು ವಿಷಯಗಳಲ್ಲಿ ರ‍್ಯಾಂಕ್ ಗಳಿಸಿದ್ದಾರೆ.
