Connect with us

    LATEST NEWS

    ವಿಡಿಯೋ – ಆಗಸದಲ್ಲಿ ಹಾರಾಟದಲ್ಲಿರುವಾಗಲೇ ವಿಮಾನದಲ್ಲಿ ಪ್ರಯಾಣಿಕರ ಪೈಟಿಂಗ್…!!

    ನವದೆಹಲಿ ಡಿಸೆಂಬರ್ 29: ವಿಮಾನದಲ್ಲಿ ಪ್ರಯಾಣಿಕರಿಬ್ಬರು ಹೊಡೆದಾಡಿಕೊಂಡ ಘಟನೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಈ ಗಲಾಟೆ ನಡೆದಿರುವುದು ವಿಮಾನ ಆಗಸದಲ್ಲಿ ಹಾರಾಡುತ್ತಿರುವ ಸಂದರ್ಭ ವಿಮಾನದ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಸಮಾಧಾನವಾಗಿ ಮಾತಾಡಿ ಎಂದು ಒಬ್ಬ ವ್ಯಕ್ತಿ ಹೇಳಿದರೆ, ಮತ್ತೊಬ್ಬ ವ್ಯಕ್ತಿ ನಿಮ್ಮ ಕೈ ಕೆಳಗಿಳಿಸಿ ಎಂದು ಕೂಗುತ್ತಾನೆ. ಹೀಗೆ ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಒಬ್ಬ ವ್ಯಕ್ತಿ ಕೋಪದಿಂದ ಮತ್ತೊಬ್ಬನ ಕಪಾಳಕ್ಕೆ ಹೊಡೆಯುತ್ತಾನೆ. ಬಳಿಕ ಅದೇ ವ್ಯಕ್ತಿ ಕನ್ನಡಕ ತೆಗೆದು ನಿರಂತರವಾಗಿ ದೃಶ್ಯದಲ್ಲಿ ಕಾಣಬಹುದಾಗಿದೆ. ಮತ್ತೊಬ್ಬ ವ್ಯಕ್ತಿ ಕೈಗಳನ್ನು ಅಡ್ಡ ಇಟ್ಟು ಏಟಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

    ಬ್ಯಾಂಕಾಕ್‌ನಿಂದ ಕೋಲ್ಕತ್ತಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಸಿಬ್ಬಂದಿ ಕೊನೆಗೂ ಇಬ್ಬರನ್ನೂ ಜಗಳ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply