Connect with us

FILM

ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಸರಸ ಸಲ್ಲಾಪ, ಇಶಾಳ ಸೀರೆ ಎತ್ತಿ ಸೊಂಟಕ್ಕೆ ಮುತ್ತಿಟ್ಟ ಸ್ಪರ್ಧಿಯ ವಿಡಿಯೋ ವೈರಲ್..!!!

ಮುಂಬೈ :  ಹಿಂದಿ ಬಿಗ್ ಬಾಸ್  ಮನೆಯೊಳಗೆ ನಡೆಯುವ ಸ್ಪರ್ಧಿಗಳ ಕಸರತ್ತು ಒಂದೆರಡಲ್ಲ. ಲವ್ ಸ್ಟೋರಿ, ಬ್ರೇಕಪ್, ಫ್ರೆಂಡ್ಶಿಪ್, ಗಲಾಟೆ, ಕಣ್ಣೀರು ಇದೆಲ್ಲಾ ಇಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಈ ನಡುವೆ ದೊಡ್ಮನೆಯಲ್ಲಿ ಆಗಾಗ ನಡೆಯುವ ಸ್ಪರ್ಥಿಗಳ ಪ್ರೇಮ ಸಲ್ಲಾಪ ವೀಕ್ಷಕರನ್ನು ತಬ್ಬಿಬ್ಬು ಮಾಡುತ್ತದೆ.

ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂತಹುದೆ ಘಟನೆ ನಡೆದಿದೆ.

ಇಂತಹುದೇ ಸನ್ನಿವೇಶದ ಬಿಗ್ ಬಾಸ್ ಮನೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸ್ಪರ್ಧಿಯೊಬ್ಬ ಮಹಿಳಾ ಸ್ಪರ್ಧಿಯೊಬ್ಬರ ಸೀರೆ ಎತ್ತಿ ಸೊಂಟಕ್ಕೆ ಮತ್ತಿಟ್ಟಿದ್ದಾನೆ. ಇಷ್ಟೇ ಅಲ್ಲದೇ ಆಕೆಯ ಗಲ್ಲಕ್ಕೆ ಮುತ್ತಿಕ್ಕುತ್ತಾ  ಮುದ್ದಾಡಿ ಪ್ರೇಮ ಸಲ್ಲಾಪ  ಮಾಡುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಹಿಂದಿ ಬಿಗ್ ಬಾಸ್ ನ ಸಮರ್ಥ್‌ ಜುರೆಲ್ ಹಾಗೂ ಇಶಾ ಮಾಳವಿಯಾ ವಿಷಯ ಸುದ್ದಿಯಾಗಿತ್ತು. ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಇಶಾ ತಮ್ಮ ಹಳೆಯ ಬಾಯ್‌ಫ್ರೆಂಡ್ ಅಭಿಷೇಕ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಈ ಸಂದರ್ಭದಲ್ಲೇ ಮನೆಗೆ ವೈಲ್ಡ್‌ ಕಾರ್ಡ್‌ನಲ್ಲಿ ಸಮರ್ಥ್ ಎಂಟ್ರಿಯಾಗಿತ್ತು.ನಾನು ಇಶಾ, ಬಾಯ್‌ಫ್ರೆಂಡ್ ಎಂದು ಸಮರ್ಥ್‌ ಪರಿಚಯಿಸಿಕೊಂಡಿದ್ದರು. ಆದರೆ ಇಶಾ ಇದನ್ನು ಅಲ್ಲಗಳೆದಿದ್ದರು. ಸಾಕಷ್ಟು ಹೈಡ್ರಾಮಾದ ನಂತರ ಇಶಾ, ಅಭಿಷೇಕ್‌ ನನ್ನ ಎಕ್ಸ್‌ ಬಾಯ್‌ಫ್ರೆಂಡ್ ಮತ್ತು ಸಮರ್ಥ್‌ ನನ್ನ ಪ್ರಸೆಂಟ್ ಬಾಯ್‌ಫ್ರೆಂಡ್ ಎಂದು ಒಪ್ಪಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ವರ್ತನೆಗಳು ದೊಡ್ಮನೆಯಲ್ಲಿ ಮಿತಿ ಮೀರಲು ಆರಂಭಿಸಿತು.

ಸೊಂಟಕ್ಕೆ ಮುತ್ತಿಟ್ಟ ರಸಿಕ ಸ್ಪರ್ಧಿ!

ವೈರಲ್ ಆಗಿರುವ ವಿಡಿಯೋದಲ್ಲಿ ಸಮರ್ಥ್‌ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಸಮರ್ಥ್‌, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡುತ್ತಾನೆ. ಪ್ರೇಮ , ಸರಸ ಸಲ್ಲಾಪದ ಈ ವಿಡಿಯೋ ಸದ್ಯ, ವೈರಲ್ ಆಗಿದೆ.
ಈ ಹಿಂದೆಯೂ ಈ ಜೋಡಿ ಬಿಗ್ ಬಾಸ್ ಮನೆಯ ಬೆಡ್ ರೂಮ್ ನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೈರಲ್ ರೊಮ್ಯಾನ್ಸ್ ಕಂಡಿರುವ ನೆಟ್ಟಿಗರು ಗರಂ ಆಗಿದ್ದಾರೆ.

https://twitter.com/i/status/1725601844817523130

Share Information
Continue Reading
Advertisement
Click to comment

Leave a Reply

Your email address will not be published. Required fields are marked *