LATEST NEWS
ಮಂಗಳೂರು : ಸಾವಿರಾರು ಮೌಲ್ಯದ ಸೊತ್ತುಗಳಿರುವ ವ್ಯಾನಿಟಿ ಬ್ಯಾಗನ್ನು ವಾರಿಸುದಾರರಿಗೆ ಹಸ್ತಾಂತರ ಮಾಡಿದ ಬಸ್ ಸಿಬಂದಿ..!
ಮಂಗಳೂರು : ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳಿರುವ ಬ್ಯಾಗನ್ನು ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದು ಬಸ್ಸ್ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರರಿಗೆ ಒಪ್ಪಿಸಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.
ದಿನಾಂಕ 19-11-2023ರಂದು ಉಡುಪಿಯಿಂದ ಮಂಗಳೂರಿಗೆ KA 20 AA 8296 ಮೂಕಾಂಬಿಕಾ ಬಸ್ಸಿನಲ್ಲಿ ಮಂಗಳೂರಿಗೆ ಬಂದಾಗ ವ್ಯಾನಿಟಿ ಬ್ಯಾಗನ್ನುವಾರಿಸುದಾರರು ಕಳಕೊಂಡಿದ್ದರು. ಬ್ಯಾಗಿನಲ್ಲಿ ನಗ ನಗದು ಸೇರಿ ಸುಮಾರು 50 ಸಾವಿರದ ಸೊತ್ತುಗಳಿದ್ದು ಸೊತ್ತು ಕಳಕೊಂಡ ಪ್ರಯಾಣಿಕರು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಕೂಡಲೇ ಕಾರ್ಯಪ್ರವರ್ತರಾದ ಪಾಂಡೇಶ್ವರ ಎಎಸ್‌ಐ ಶ್ರೀಧರ ಅವರು ಬಸ್ ಏಜಂಟ್ ಗಳನ್ನು ಸಂಪರ್ಕಿಸಿ ಕಳಕೊಂಡ ಸೊತ್ತಿನ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ. 20-11-2023 ರಂದು ಸೋಮವಾರ ಬಸ್ಸಿನ ನಿರ್ವಾಹಕ ಜಯರಾಜ್ ಅವರು ಪಾಂಡೇಶ್ವರ ಠಾಣಾ ಎಎಸ್‌ಐ ಶ್ರೀಧರ ಅವರ ನೇತೃತ್ವದಲ್ಲಿ ಅತ್ಯಮೂಲ್ಯ ಸೊತ್ತುಗಳಿರುವ ವ್ಯಾನಿಟಿ ಬ್ಯಾಗನ್ನು ವಾರಿಸುದಾರರಿಗೆ ಹಸ್ತಾಂತ ಮಾಡಿ ಮಾನವೀಯತೆ ಮೆರೆದಿದ್ದಾರೆ.
You must be logged in to post a comment Login