Connect with us

LATEST NEWS

ರಾಜಕೀಯ ದ್ವೇಷಕ್ಕೆ ತನ್ನ ಎರಡು ಕಾಲನ್ನು ಕಳೆದುಕೊಂಡಿದ್ದ ಆರ್ ಎಸ್ಎಸ್ ಕಾರ್ಯಕರ್ತ ಸದಾನಂದನ್ ಮಾಸ್ಟರ್ ರಾಜ್ಯಸಭೆಗೆ

ಕೇರಳ ಜುಲೈ 14: ಕೇರಳದ ರಾಜಕೀಯ ದ್ವೇಷಕ್ಕೆ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಆರ್ ಎಸ್ ಎಸ್ ಕಾರ್ಯಕರ್ತರ ಸದಾನಂದನ್ ಮಾಸ್ಟರ್ ಅವರಿಗೆ ಬಿಜೆಪಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ತಾನು ತನ್ನ ಕಾರ್ಯಕರ್ತರನ್ನು ಎಂದಿಗೂ ಮರೆಯುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಕಮ್ಯುನಿಷ್ಟ ಸದಸ್ಯರಾಗಿದ್ದ ಸದಾನಂದನ್ ಮಾಸ್ಟರ್ ಕಮ್ಯುನಿಷ್ಟ ಸಿದ್ದಾಂತಗಳಿಗೆ ವಿರೋಧಿ ವ್ಯಕ್ತಪಡಿಸಿ ಆರ್ ಎಸ್ಎಸ್ ಗೆ ಸೇರ್ಪಡೆಯಾಗಿದ್ದರು.


ಅಸ್ಸಾಂನ ಗುವಹಾಟಿಯಲ್ಲಿ ಬಿ.ಎಡ್ ಪದವಿ ಮುಗಿಸಿದ ನಂತರ, ಕಣ್ಣೂರಿನ ಕುಳಿಕಲ್ ಪ್ರದೇಶದಲ್ಲಿ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನವನ್ನು ಸದಾನಂದನ್ ಆರಂಭಿಸಿದರು. ಬರಬರುತ್ತಾ ಇವರಿಗೆ ಸಿಪಿಐಎಂ ನಾಯಕರೊಂದಿಗೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಎದುರಾದವು, ಕಮ್ಯೂನಿಸ್ಟ್ ಸಿದ್ದಾಂತಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದರು. ಇದರಿಂದಾಗಿ ಇವರಿಗೆ ಜೀವ ಬೆದರಿಕೆಗಳು ಬರಲಾರಂಭಿಸಿದವು. ಇದನ್ನೆಲ್ಲಾ ಧಿಕ್ಕರಿಸಿ ಸಿಪಿಐಎಂನ ಭದ್ರಕೋಟೆಯಂತಿರುವ ಮಟ್ಟನ್ನೂರು ಎನ್ನುವಲ್ಲಿ RSS ಘಟಕವನ್ನು ಸ್ಥಾಪಿಸಿದರು. ಇದು, ಕಮ್ಯೂನಿಸ್ಟರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದೇ ವೇಳೆ, ಸಂಘ ಇವರನ್ನು ಬೌದ್ದಿಕ್ ಪ್ರಮುಖ ಆಗಿ ನೇಮಿಸಿತು.


ಜನವರಿ 25, 1994 ರಂದು ಕಣ್ಣೂರಿನ ಮಟ್ಟನೂರಿನಲ್ಲಿ 30 ನೇ ವಯಸ್ಸಿನಲ್ಲಿ ಸದಾನಂದನ್ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದರು. ಕಟ್ಟಾ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವರ ಎರಡೂ ಕಾಲುಗಳನ್ನು ಕತ್ತರಿಸಲಾಯಿತು. ಅಂದಿನಿಂದ ಅವರು ಕೃತಕ ಅಂಗಾಂಗಗಳೊಂದಿಗೆ ಬದುಕುತ್ತಿದ್ದಾರೆ.

ತ್ರಿಶೂರ್‌ನಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಸದಾನಂದನ್, 2016 ಮತ್ತು 2021 ರ ವಿಧಾನಸಭಾ ಚುನಾವಣೆಯಲ್ಲಿ ಕಣ್ಣೂರಿನ ಕುತ್ತುಪರಂಬದಲ್ಲಿ ಸ್ಪರ್ಧಿಸಿದ್ದರು. ಮೋದಿ ಅವರ ಪರವಾಗಿ ಪ್ರಚಾರ ಮಾಡಿದ್ದರು ಮತ್ತು ಅವರನ್ನು ಕಮ್ಯುನಿಸ್ಟ್ ಪಕ್ಷದ ರಾಜಕೀಯ ಹಿಂಸಾಚಾರದ ಜೀವಂತ ಹುತಾತ್ಮರೆಂದು ಎತ್ತಿ ತೋರಿಸಿದ್ದರು. ತಮ್ಮ ನಾಮನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಸದಾನಂದನ್, ರಾಜ್ಯಸಭೆಗೆ ತಮ್ಮನ್ನು ನಾಮನಿರ್ದೇಶನ ಮಾಡುವ ಮೂಲಕ ಕೇರಳಕ್ಕೆ ಬಿಜೆಪಿ ನೀಡುತ್ತಿರುವ ಮಹತ್ವ ಹೆಚ್ಚು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು. ಸದಾನಂದನ್ ಅವರೊಂದಿಗೆ ರಾಜ್ಯಸಭೆಯಲ್ಲಿ ಕೇರಳದಿಂದ ಮೂವರು ಸಂಸದರು ಇರುತ್ತಾರೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ಮಾಜಿ ಅಥ್ಲೀಟ್ ಪಿಟಿ ಉಷಾ ಇತರರು. ನಟ, ರಾಜಕಾರಣಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಲೋಕಸಭೆಯಲ್ಲಿ ಕೇರಳದಿಂದ ಆಯ್ಕೆಯಾದ ಏಕೈಕ ಮತ್ತು ಮೊದಲ ಸಂಸದರಾಗಿದ್ದಾರೆ. ಇತ್ತೀಚೆಗೆ ನಡೆದ ಪಕ್ಷದ ರಾಜ್ಯ ನಾಯಕತ್ವದ ಪುನರ್ರಚನೆಯಲ್ಲಿ ಸದಾನಂದನ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *