DAKSHINA KANNADA
ಫ್ರಿಡ್ಜ್ ಮುಟ್ಟಿದ ಬಾಲಕನಿಗೆ ಕರೆಂಟ್ ಶಾಕ್ – 5 ವರ್ಷದ ಬಾಲಕನ ದುರಂತ ಸಾವು

ಸುಳ್ಯ, ಜುಲೈ 03: ಮನೆಯಲ್ಲಿದ್ದ ಫ್ರಿಡ್ಜ್ ಮುಟ್ಟಿದ 5 ವರ್ಷದ ಬಾಲಕ ವಿದ್ಯುತ್ ತಗುಲಿ ಸಾವನಪ್ಪಿರುವ ಘಟನೆ ಐವರ್ನಾಡಿನ ಕೈಯೊಳ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿಗಳಾದ ಹೈದರ್ ಅಲಿ–ಅಫ್ಸಾ ದಂಪತಿಯ ಪುತ್ರ ಮಹಮ್ಮದ್ ಆದಿಲ್ ಮೃತ ಬಾಲಕ.
ಅಫ್ಸಾ ಅವರು ಮಗ ಆದಿಲ್‌ನನ್ನು ಕರೆದುಕೊಂಡು ಸುಳ್ಯ ತಾಲ್ಲೂಕಿನ ಐವರ್ನಾಡಿನ ಕೈಯೊಳ್ತಡ್ಕದಲ್ಲಿರುವ ತವರು ಮನೆಗೆ ಐದು ದಿನಗಳ ಹಿಂದೆ ತೆರಳಿದ್ದರು. ‘ಶನಿವಾರ ಮಧ್ಯಾಹ್ನ ಊಟ ಮಾಡಿದ ಬಳಿಕ ಆದಿಲ್ ಕೈಯೊಳ್ತಡ್ಕದ ಅಜ್ಜನ ಮನೆಯಲ್ಲೇ ಆಟವಾಡುತ್ತಿದ್ದ. ಈ ವೇಳೆ ಪ್ರಿಡ್ಜನ್ನು ಮುಟ್ಟಿದಾಗ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಚಿಕಿತ್ಸೆ ಕೊಡಿಸಲು ತಕ್ಷಣವೇ ಆತನನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
