LATEST NEWS
ಹಣಕ್ಕಾಗಿ ದೇಶದ ಭದ್ರತೆಗೆ ಧಕ್ಕೆಯಾದ ಪತ್ರಕರ್ತ ಅರೆಸ್ಟ್…

ಹಣಕ್ಕಾಗಿ ದೇಶದ ಭದ್ರತೆಗೆ ಧಕ್ಕೆಯಾದ ಪತ್ರಕರ್ತ ಅರೆಸ್ಟ್…
ನವದೆಹಲಿ, ಸೆಪ್ಟಂಬರ್ 19: ದೇಶದ ಅತೀ ರಹಸ್ಯ ಮಾಹಿತಿಯನ್ನು ಚೀನಾದ ಗುಪ್ತಚರ ಸಂಸ್ಥೆಗೆ ರವಾನಿಸಿದ ಆರೋಪದಡಿ ಹಿರಿಯ ಪತ್ರಕರ್ತ ರಾಜೀವ್ ಶರ್ಮ ರನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ.
ದೇಶದ ರಕ್ಷಣೆ ಮತ್ತು ಯುದ್ಧ ತಂತ್ರದ ರಹಸ್ಯ ಮಾಹಿತಿಯನ್ನು ಹಣಕ್ಕಾಗಿ ಈ ಪತ್ರಕರ್ತ ಚೀನಾ ಗುಪ್ತಚರ ಏಜೆಂಟ್ ಗಳಿಗೆ ರವಾನಿಸಿದ್ದಾನೆ.

2016 ರಿಂದ 2018 ರ ವರೆಗೆ ಈ ರೀತಿಯ ವ್ಯವಹಾರದಲ್ಲಿ ರಾಜೀವ್ ಶರ್ಮ ಭಾಗಿಯಾಗಿದ್ದು, ಈತನ ಜೊತೆಗೆ ಓರ್ವ ಚೀನೀ ಮಹಿಳೆ ಹಾಗೂ ನೇಪಾಳದ ವ್ಯಕ್ತಿಯನ್ನೂ ಬಂಧಿಸಲಾಗಿದೆ.
ದೆಹಲಿಯ ಮಹಿಪಾಲ್ಪುರ್ ಎಂಬಲ್ಲಿ ಈ ವ್ಯಕ್ತಿಗಳು ಕಛೇರಿಯೊಂದನ್ನು ಹೊಂದಿದ್ದು, ಚೀನಾಕ್ಕೆ ಮೆಡಿಸಿನ್ ಗಳನ್ನು ರಫ್ತು ಮಾಡುವ ಕೆಲಸದಲ್ಲಿ ನಿರತರಾಗಿದ್ದರು.
ಚೀನಾದಿಂದ ಹಣ ಏಜೆಂಟ್ ಮೂಲಕ ಈ ಪತ್ರಕರ್ತನಿಗೆ ತಲುಪುತ್ತಿದ್ದು, ಕೇವಲ ಒಂದೇ ವರ್ಷದಲ್ಲಿ 40 ರಿಂದ 45 ಲಕ್ಷ ರೂಪಾಯಿಗಳು ಚೀನಾದ ಮೂಲಕ ಈತನಿಗೆ ಲಭ್ಯವಾಗಿರುವ ಬಗ್ಗೆ ಮಾಹಿತಿ ಸಂಗ್ರಹವಾಗಿದೆ.
ಭಾರತ ಹಾಗೂ ಚೀನಾ ನಡುವೆ ನಿರಂತರವಾಗಿ ಗಡಿ ವಿವಾದ ಹಾಗೂ ಇತರ ವಿವಾದಗಳ ಶೀತನ ಸಮರ ನಡೆಯುತ್ತಿದ್ದು, ಈ ನಡುವೆ ಭಾರತದ ರಹಸ್ಯ ಮಾಹಿತಿಗಳನ್ನು ಚೀನಾಕ್ಕೆ ರವಾನಿಸುತ್ತಿರುವ ವಿಚಾರ ಇದೀಗ ದೇಶದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ.
ಅದರಲ್ಲೂ ಪತ್ರಕರ್ತನಾಗಿ ದೇಶದ ರಹಸ್ಯ ಮಾಹಿತಿಗಳನ್ನು ವೈರಿ ದೇಶಕ್ಕೆ ನೀಡುತ್ತಿದ್ದ ರಾಜೀವ್ ಶರ್ಮ ವಿರುದ್ಧ ಇದೀಗ ಭಾರಿ ಆಕ್ರೋಶವೂ ಕೇಳಿ ಬರಲಾರಂಭಿಸಿದೆ.