Connect with us

    LATEST NEWS

    ಸೆಪ್ಟೆಂಬರ್ 28 ರಿಂದ ನಿಬಂಧನೆಗಳೊಂದಿಗೆ ಭಕ್ತರಿಗೆ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ

    ಉಡುಪಿ ಸೆಪ್ಟೆಂಬರ್ 19 : 6 ತಿಂಗಳ ಬಳಿಕ ಉಡುಪಿ ಶ್ರೀಕೃಷ್ಣ ಮಠ ಭಕ್ತರಿಗೆ ಇದೇ ಸೆಪ್ಟೆಂಬರ್ 28 ರಿಂದ ತೆರೆದುಕೊಳ್ಳಲಿದೆ. ಕೊರೊನಾದಿಂದಾಗಿ ಭಕ್ತರಿಗೆ ಸಂಪೂರ್ಣ ಬಂದ್ ಆಗಿದ್ದ ಶ್ರೀಕೃಷ್ಣಮಠ ಆರು ತಿಂಗಳ ಬಳಿಕ ಭಕ್ತರಿಗೆ ತೆರೆದುಕೊಳ್ಳಲಿದೆ.

    ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಶ್ರೀಕೃಷ್ಣ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್  ಸೆಪ್ಟೆಂಬರ್ 21ರ ಬಳಿಕ ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಿದೆ. ಅದರಂತೆ, ಕೃಷ್ಣಮಠದಲ್ಲಿ ಸೆಪ್ಟೆಂಬರ್ 28 ರಿಂದ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು. ಅನ್ನಸಂತರ್ಪಣೆ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.


    ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಈ ಹಿನ್ನಲೆ ಉಡುಪಿಯಲ್ಲೂ ಶ್ರೀಕೃಷ್ಣ ಮಠಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.  ನಂತರ ಕೇಂದ್ರ ಸರಕಾರದ ಅನ್ಲಾಕ್ ಪ್ರಕ್ರಿಯೆಗಳಲ್ಲಿ ದೇವಸ್ಥಾನಗಳಲ್ಲಿ ಮಾರ್ಗಸೂಚಿಗಳ ಅನ್ವಯ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಹಿನ್ನಲೆ ರಾಜ್ಯ ಸರಕಾರ ಜೂನ್ 8ರಿಂದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಕೇವಲ ದರ್ಶನ ಮಾತ್ರವಾಗಿತ್ತು, ಸೇವೆಗಳು ಇರಲಿಲ್ಲ. ಇದೀಗ ಸೆಪ್ಟೆಂಬರ್ 1ರಿಂದ ಸೇವೆಗಳನ್ನು ಸ್ವೀಕರಿಸಲೂ ಇಲಾಖೆ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಸೇವೆಗಳು ಆರಂಭಗೊಂಡಿವೆ.

    ಆದರೆ ಶ್ರೀಕೃಷ್ಣ ಮಠದಲ್ಲಿ ಮಾತ್ರ ಕೋವಿಡ್ ಸೋಂಕು ವಿಸ್ತರಣೆಯಾಗುತ್ತಲೇ ಇದ್ದ ಕಾರಣ ಸಾರ್ವಜನಿಕ ಭಕ್ತರ ಪ್ರವೇಶ ನಿರ್ಬಂಧವನ್ನು ಮುಂದುವರಿಸ ಲಾಗಿತ್ತು. ಶ್ರೀಕೃಷ್ಣ ಜಯಂತಿ, ವಿಟ್ಲಪಿಂಡಿ ಹಬ್ಬಗಳನ್ನೂ ಸಾಂಪ್ರದಾಯಿಕವಾಗಿ ಮಾತ್ರ ನೆರವೇರಿಸಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply