DAKSHINA KANNADA
ಬೆಂಕಿಯಲ್ಲಿ ಅರಳಿದ ಸ್ವಾತಂತ್ರ್ಯ ಹೋರಾಟಗಾರರು!
ಮಂಗಳೂರು, ಆಗಸ್ಟ್ 15: 78ನೇ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗು ಖ್ಯಾತ ಕಲಾವಿದ ಪರಿಕ್ಷೀತ್ ನೆಲ್ಯಾಡಿಯವರು ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರವನ್ನು ವಿಶಿಷ್ಟವಾಗಿ ಚಿತ್ರಿಸಿದ್ದಾರೆ.
ಪೇಪರ್ ಕಟ್ಟಿಂಗ್ ನಲ್ಲಿ ರಾಷ್ಟ್ರಪಿತ ಗಾಂಧಿಜೀಯವರ ಚಿತ್ರವನ್ನು ರಚಿಸಿದ್ದು, ಫೈರ್ ಆರ್ಟ್ ನಲ್ಲಿ ಭಗತ್ ಸಿಂಗ್ ಚಿತ್ರವನ್ನು ರಚಿಸಿದ್ದಾರೆ.
ಕಲಾವಿದ ಪರಿಕ್ಷೀತ್ ನೆಲ್ಯಾಡಿ ಈ ಮೊದಲು ಪೇಪರ್ ಕಟ್ಟಿಂಗ್ ಆರ್ಟ್ ನಲ್ಲಿ 3ನಿಮಿಷ 12 ಸೆಕೆಂಡುಗಳಲ್ಲಿ ವಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ. ಪೇಪರ್ ಕಟ್ಟಿಂಗ್ ಆರ್ಟ್ ನಲ್ಲಿ ದೇಶದಲ್ಲಿ 3 ಜನ ಮಾತ್ರ ಕಲಾವಿದರಿದ್ದು, ಪರಿಕ್ಷೀತ್ ನೆಲ್ಯಾಡಿಗೆ ವಲ್ಡ್ ರೆಕಾರ್ಡ್ ಸಂಸ್ಥೆ ವಲ್ಡ್ ಫಸ್ಟೆಸ್ಟ್ ಪೇಪರ್ ಕಟ್ಟಿಂಗ್ ಆರ್ಟಿಸ್ಟ್ ( Worlds Fastest Paper Cutting Artist) ಎಂಬ ಬಿರುದು ನೀಡಿದೆ.
ಅದೇ ರೀತಿ ಫೈರ್ ಆರ್ಟ್ ನಲ್ಲಿ 5 ನಿಮಿಷ 45 ಸೆಕೆಂಡ್ ಗಳ ಇಂಡಿಯನ್ ಬುಕ್ ಆಫ್ ರೆಕಾರ್ಡ್ (Indian Book Of Records) ನಲ್ಲಿ ದಾಖಲೆ ಬರೆದಿದ್ದಾರೆ.
You must be logged in to post a comment Login