LATEST NEWS
ಅಮಲೇರಿದರೆ ಇನ್ನು ನೋ ವರೀಸ್ : ರಚನಾ ಬಾರಿನಲ್ಲಿದೆ ಫ್ರೀ ಅಟೋ ಸರ್ವಿಸ್

ಅಮಲೇರಿದರೆ ಇನ್ನು ನೋ ವರೀಸ್ : ರಚನಾ ಬಾರಿನಲ್ಲಿದೆ ಫ್ರೀ ಅಟೋ ಸರ್ವಿಸ್
ಬಾರ್ ಬಾರ್ ದೆಖೋ : ಅಜೆಕಾರಿನಲ್ಲಿ ಬಾರ್ ಮಾಲಕನಿಂದ ಗ್ರಾಹಕರಿಗೆ ಉಚಿತ ಪಿಕಪ್-ಡ್ರಾಪ್
ಉಡುಪಿ, ಮಾರ್ಚ್ 15 :ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಉಚಿತ ವಾಹನ ವ್ಯವಸ್ಥೆ ಮಾಡಿರುವುದನ್ನು ಕಂಡಿರದವರು ಯಾರೂ ಇಲ್ಲ.
ಆದರೆ ಇಲ್ಲೊಬ್ಬರು ಬಾರ್ ( ಮಧ್ಯದಂಗಡಿ) ಗೆ ತೆರಳಲು ಅನುಕೂಲವಾಗುವಂತೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಿದ್ದಾರೆ.

ಹೌದು ಉಡುಪಿಯ ಕಾರ್ಕಳ ತಾಲೂಕಿನಲ್ಲಿ ಇಂತಹದೊಂದು ವ್ಯವಸ್ಥೆ ಆರಂಭಿಸಲಾಗಿದೆ.
ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಬಾರ್ ಮಾಲಕ ತನ್ನ ಮಧ್ಯದಂಗಡಿಗೆ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರವನ್ನು ಕಂಡುಕೊಂಡಿದ್ದಾನೆ.
ತನ್ನ ಬಾರಿಗೆ ಬರುವ ಮಧ್ಯಪ್ರೀಯರಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾನೆ.
ಇದಕ್ಕಾಗಿ ಅಟೋ ರಿಕ್ಷಾವೊಂದನ್ನು ಗೊತ್ತು ಮಾಡಿ ಅದಕ್ಕೆ ಉಚಿತ ಪ್ರಯಾಣದ ವ್ಯವಸ್ಥೆಯ ಫ್ಲೆಕ್ಸ್ ನ ಬೋರ್ಡ್ ಹಾಕಿ ಕುಡುಕರನ್ನು ಸೆಳೆಯಲು ತಂತ್ರ ಹೂಡಿದ್ದಾನೆ.
ಸರ್ವೊಚ್ಚ ನ್ಯಾಯಾಲಯ ಆದೇಶದ ಮೇರೆಗೆ ಈ ರಚನಾ ಬಾರ್ ಹೆದ್ದಾರಿಯಿಂದ 550 ಮೀ. ದೂರದಲ್ಲಿ ಆರಂಭಿಸಲಾತ್ತು.
ಆದರೆ ದಿನದಿಂದ ದಿನಕ್ಕೆ ಬಾರಿನ ವ್ಯವಹಾರ ಕುಸಿಯುತ್ತಿತ್ತು.
ಈ ಹಿನ್ನೆಲೆಯಲ್ಲಿ ಬಾರ್ ನ ಮಾಲಿಕ ಗ್ರಾಹಕರನ್ನು ಸೆಳೆಯಲು ಈ ನೂತನ ಉಪಾಯ ಕಂಡುಕೊಂಡಿದ್ದಾರೆ.
ಅಜೆಕಾರು ಪೇಟೆಯಿಂದ ಸ್ವಲ್ಪ ದೂರದಲ್ಲಿರುವ ಈ ಬಾರ್ ಗೆ ಕುಡುಕರು ನಿತ್ಯ ತೆರಳಲು ಈ ಅಟೋ ಪುಕ್ಸಟೆ ಪ್ರಯಾಣದ ಸೌಲಭ್ಯ ಕಲ್ಪಿಸಿದೆ.
ಅಜೆಕಾರಿನ ರಚನಾ ಬಾರಿನ ಮಾಲಕರ ಈ ಕೊಡುಗೆ ಮಧ್ಯಪ್ರೀಯರಿಗೆ ಅರ್ಥಾತ್ ಕುಡುಕರಿಗೆ ಸಂತಸ ತಂದರೆ. ಮತ್ತೆ ಕೆಲವರ ಮುಖ ಕೆಂಪಾಗಿರಿಸಿದೆ.