LATEST NEWS
ಮಂಗಳೂರಿನಲ್ಲಿ ಬೆಂಕಿ ಅನಾಹುತ : ಸುಟ್ಟು ಕರಕಲಾದ ಗುಜರಿ ಅಂಗಡಿ
ಮಂಗಳೂರಿನಲ್ಲಿ ಬೆಂಕಿ ಅನಾಹುತ : ಸುಟ್ಟು ಕರಕಲಾದ ಗುಜರಿ ಅಂಗಡಿ
ಮಂಗಳೂರು,ಮಾರ್ಚ್ 16 : ಮಂಗಳೂರು ನಗರದ ಹಳೇ ಬಂದರಿಲ್ಲಿ ಗುಜರಿ ಅಂಗಡಿಯೊಂದು ಆಕಸ್ಮಿಕ ಬೆಂಕಿ ಹತ್ತಿಕೊಂಡು ಸುಟ್ಟು ಬೂದಿಯಾಗಿದೆ.
ಬಂದರಿನ ಬೇಬಿ ಅಲಬಿ ರಸ್ತೆಯಲ್ಲಿರುವ ಈ ಗಜರಿ ಅಂಗಡಿಗೆ ಏಕಾಎಕಿ ಬೆಂಕಿ ಹತ್ತಿಕೊಂಡಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿ ವ್ಯಾಪಿಸಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿ ಪಾಂಡೇಶ್ವರ ಅಗ್ನಿಶಾಮಕ ದಳ ಸತತ ಎರಡು ಗಂಟೆ ಕಾಲ ಶ್ರಮದ ಬಳಿಕ ಬೆಂಕಿ ನಂದಿಸಲು ಯಶಸ್ವಿಯಾಗಿದೆ.
ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬಂದಿಯ ಕಾರ್ಯಾಚರಣೆ ಯಿಂದಾಗಿ ಪಕ್ಕದ ಇತರ ಅಂಗಡಿಗಳಿಗೆ ಹರಡುವುವ ಅನಾಹುತ ತಪ್ಪಿದೆ.
ಬೆಂಕಿಗೆ ಶಾರ್ಟ್ ಸರ್ಕಿಟ್ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಬಂದರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login