KARNATAKA
ಎಲ್ಲರಿಗೂ ಉಚಿತ ರೇಬಿಸ್ ಲಸಿಕೆ
ಬೆಂಗಳೂರು ಅಕ್ಟೋಬರ್ 07: ನಾಯಿ ಕಡಿತದಿಂದ ಬರುವ ಮಾರಣಾಂತಿಕ ರೇಬೀಸ್ ರೋಗವನ್ನು 2030ರೊಳಗೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಆ್ಯಂಟಿ ರೇಬಿಸ್ ವ್ಯಾಕ್ಸಿನ್ (ಎಆರ್ ವಿ) ಮತ್ತು ರೇಬಿಸ್ ಇಮ್ಯೂನೊ ಗ್ಲಾಬಿಲಿನ್ ಲಸಿಕೆಗಳನ್ನು ಉಚಿತವಾಗಿ ನೀಡಲು ರಾಜ್ಯ ಅರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರೇಬಿಸ್ ಅನ್ನು ಗುರುತಿಸಲ್ಪಟ್ಟ ಕಾಯಿಲೆ ಎಂದು ಪರಿಗಣಿಸಲಾಗಿದ್ದು, ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಪರಿಗಣಿಸದೇ ನಾಯಿ ಕಡಿತಕ್ಕೊಳಗಾದ ಎಲ್ಲರಿಗೂ ಉಚಿತ ವಾಗಿ ನೀಡಬೇಕೆಂದು ಸೂಚಿಸಲಾಗಿದೆ.