DAKSHINA KANNADA
ಶಿಬರೂರು ಜಾತ್ರೆಯಲ್ಲಿ ಈಝೀ ಆಯುರ್ವೇದ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಸೇವೆ
ಮಂಗಳೂರು : ಡಿಸೆಂಬರ್ 17 ರಿಂದ ಆರಂಭವಾದ ಇತಿಹಾಸ ಪ್ರಸಿದ್ದ ಕಾರ್ಣಿಕ ಕ್ಷೇತ್ರ ಶಿಬರೂರು ಜಾತ್ರೆಯಲ್ಲಿ ಮಂಗಳೂರಿನ ಖ್ಯಾತ ಈಝೀ ಆಯುರ್ವೇದ ಹಾಸ್ಪಿಟಲ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ನೂರಾರು ಜನ ಡಿ. 17 ರಿಂದ 19 ರ ವರಗೆ ಮೂರು ದಿನಗಳ ಕಾಲ ನಡೆದ ಈ ಉಚಿತ ಅರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದರು. ವೈದ್ಯರುಗಳಾದ ಡಾ. ರವಿಗಣೇಶ್ ಮೊಗ್ರ , ಡಾ. ಜನಾರ್ಧನ ವಿ ಹೆಬ್ಬಾರ್, ಡಾ. ಅಶ್ವಿನ್ ಜಯರಾಮ್ ಶೆಟ್ಟಿ, ಡಾ. ಸುದರ್ಶನ್ ಸಿ ಹೆಚ್ ಅವರು ಪಾಲ್ಗೊಂಡು ಹಲವು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಆಯುರ್ವೇದ ಔಷಧಿಗಳನ್ನು ವಿತರಿಸಿದರು.
ಈಝೀ ಆಯುರ್ವೇದ ಆಸ್ಪತ್ರೆಯ ಬಗ್ಗೆ :
ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿ ನೇತ್ರಾವತಿ ನದಿ ತಟದಲ್ಲಿ ಕರಾವಳಿಯ ಏಕೈಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‘ಈಝೀ ಆಯುರ್ವೇದ ಆಸ್ಪತ್ರೆ’ ಕಾರ್ಯಾಚರಿಸುತ್ತಿದೆ. ಡಿಲಕ್ಸ್, ಸೆಮಿ ಡಿಲಕ್ಸ್, ಸ್ಟ್ಯಾಂಡರ್ಡ್ ರೂಮ್‌ಗಳು ಮತ್ತು ಜನರಲ್ ವಾರ್ಡ್‌ಗಳನ್ನು ಹೊಂದಿರುವ 50 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರಿಗೆ ಅತ್ಯುತ್ತಮವಾದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯ. ವಿಶೇಷ ಪರಿಣತಿ ಮತ್ತು ಅನುಭವಿ ಆಯುರ್ವೇದ ವೈದ್ಯರ ತಂಡವಿದೆ. ಪಂಚಕರ್ಮ ಚಿಕಿತ್ಸೆಗಳು, ವಿಶೇಷ ಆಯುರ್ವೇದ ಶಸ್ತ್ರಚಿಕಿತ್ಸಾ ಮತ್ತು ಪ್ಯಾರಾ ಶಸ್ತ್ರಚಿಕಿತ್ಸಾ ವಿಧಾನಗಳು, ಯೋಗ ಮತ್ತು ಧ್ಯಾನ, ಫಿಸಿಯೋಥೆರಪಿ ವಿಭಾಗ, ಸಮಗ್ರ ಆಯುರ್ವೇದ ಸೌಂದರ್ಯವರ್ಧಕ ಆರೈಕೆ, ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಕಸ್ಟಮೈಸ್ ಮಾಡಿದ ಆಹಾರ ಯೋಜನೆಗಳನ್ನು ಈಝೀ ಆಯುರ್ವೇದ ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618898900 ಅಥವಾ 8867385567