LATEST NEWS
ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು
ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು
ಉಡುಪಿ ಮೇ.25: ರಾಜ್ಯಸರಕಾರ ಲಾಕ್ ಡೌನ್ 4.0 ದಲ್ಲಿ ಸಾರಿಗೆ ವ್ಯವಸ್ಥೆ ಪ್ರಾರಂಭಕ್ಕೆ ಅವಕಾಶ ನೀಡಿದ್ದರೂ ಕೂಡ ಆರ್ಥಿಕ ನಷ್ಟದ ಕಾರಣ ಕರಾವಳಿಯಲ್ಲಿ ಯಾವುದೇ ಖಾಸಗಿ ಬಸ್ ರಸ್ತೆಗೆ ಇಳಿದಿರಲಿಲ್ಲ. ಇದರಿಂದಾಗಿ ದಿನನಿತ್ಯ ಕೆಲಸ ಕಾರ್ಯಕ್ಕೆ ತೆರಳುವವರಿಗೆ ಭಾರಿ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಉಡುಪಿ ಶಾಸಕ ರಘುಪತಿ ಭಟ್ ಸ್ವಂತ ಖರ್ಚಿನಲ್ಲಿ ಉಡುಪಿಯಲ್ಲಿ ಇಂದಿನಿಂದ ಉಡುಪಿಯಲ್ಲಿ ಖಾಸಗಿ ಬಸ್ ಓಡಾಟ ನಡೆಸಲಿದೆ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ಖಾಸಗಿ ಬಸ್ ಮಾಲಕರು ತೆರಿಗೆಯಿಂದ ತಪ್ಪಿಸಿಕೊಳ್ಳಲು ತಮ್ಮ ಬಸ್ ಗಳನ್ನು ಈಗಾಗಲೇ ಆರ್ ಟಿಓ ಗೆ ಸರಂಡರ್ ಮಾಡಿದ್ದಾರೆ. ಈ ಹಿನ್ನಲೆ ಸದ್ಯ ಉಡುಪಿಯಲ್ಲಿ ಯಾವುದೇ ಖಾಸಗಿ ಬಸ್ ರಸ್ತೆಗೆ ಇಳಿದಿರಲಿಲ್ಲ. ಇದರಿಂದಾಗಿ ಜನ ಸಾಮಾನ್ಯರ ಓಡಾಟಕ್ಕೆ ತೊಂದರೆಯಾದ ಹಿನ್ನಲೆ ಉಡುಪಿ ಶಾಸಕ ರಘುಪತಿ ಭಟ್ ಉಡುಪಿ ನಗರದ ಏಳು ರೂಟ್ ಗಳಿಗೆ 12 ಬಸ್ಸುಗಳ ಉಚಿತವಾಗಿ ಓಡಾಟ ನಡೆಸಲು ಪ್ರಾರಂಭಿಸಿದ್ದಾರೆ.
ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಈ ಉಚಿತ ಬಸ್ ಸೇವೆಯನ್ನು ಉದ್ಘಾಟಿಸಿದರು. ಈ ಬಸ್ ಗಳು ಟಿಕೆಟ್ ಕಲೆಕ್ಟರ್ ಇಲ್ಲದೆ ಓಡಾಡಲಿವೆ. ಬಸ್ಸಿನಲ್ಲಿ ಡ್ರೈವರ್ ಜೊತೆಗೆ ಬಿಜೆಪಿ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ ಬಸ್ಸಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬಿಜೆಪಿ ಕಾರ್ಯಕರ್ತರು ಸಂಗ್ರಹಿಸಲಿದ್ದಾರೆ.