Connect with us

LATEST NEWS

ಉಡುಪಿಯಲ್ಲಿ 100 ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ಉಡುಪಿಯಲ್ಲಿ 100 ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ಉಡುಪಿ, ಮೇ 25: ಉಡುಪಿ ಮಹಾರಾಷ್ಟ್ರದಿಂದ ಬಂದ ಕೊರೊನಾ ಸೊಂಕಿತರ ಸಂಖ್ಯೆಯಿಂದ ಸಂಪೂರ್ಣ ಕಂಗಾಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ.

ಇಂದು ಒಂದೇ ದಿನ ಉಡುಪಿಯಲ್ಲಿ ದಾಖಲೆಯ 32 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಓರ್ವ 65ವರ್ಷದ ಮಹಿಳೆಗೆ P-1435 ಸಂಪರ್ಕದಿಂದ ಸೋಂಕು ಹರಡಿದ್ದರೆ , ಮತ್ತೋರ್ವ 57 ವರ್ಷದ ವ್ಯಕ್ತಿಗೆ ಕಂಟೋನ್ಮೆಟ್ ಜೋನ್ ನಿಂದ ಸೋಂಕು ಹರಡಿದೆ. ಇಂದು ಪತ್ತೆಯಾದ ಬಾಕಿ ಉಳಿದ ಪ್ರಕರಣಗಳಲ್ಲಿ ಎಲ್ಲರೂ ಮಹಾರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪ್ರಯಾಣದಿಂದ ಹಿಂತಿರುಗಿದವರಾಗಿದ್ದಾರೆ.

ಇನ್ನು ಇಂದು ಪತ್ತೆಯಾದ ಪ್ರಕರಣಗಳಲ್ಲಿ ಅತೀ ಹೆಚ್ಚು ಮಕ್ಕಳಲ್ಲೇ ಕೊರೊನಾ ಸೊಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದ್ದು,
ಇಂದಿನ ಪ್ರಕರಣ ಸೇರಿ ಉಡುಪಿ ಜಿಲ್ಲೆಯಲ್ಲಿ ಓಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 108 ಕ್ಕೆ ಏರಿದೆ. ಈ ಪೈಕಿ 104 ಸಕ್ರಿಯ ಪ್ರಕರಣಗಳಾಗಿದ್ದು, ಮೂವರು ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

Facebook Comments

comments