LATEST NEWS
4 ವರ್ಷದ ಮಗುವಿನ ಮೇಲೆ ಗೂಳಿ ದಾಳಿ: ವಿಡಿಯೋ ವೈರಲ್

ಆಲಿಗಢ ಮಾರ್ಚ್ 9: ಆಲಿಗಢ ಜಿಲ್ಲೆಯ ಧನಿಪುರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 4 ವರ್ಷದ ಮಗುವಿನ ಮೇಲೆ ಗೂಳಿಯೊಂದು ದಾಳಿ ಮಾಡಿದೆ.ದಾಳಿಯಂದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧನಿಪುರದಲ್ಲಿ 4 ವರ್ಷದ ಮಗುವನ್ನು ಅಜ್ಜ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. ನಂತರ ಮಗುವನ್ನು ಬೀದಿಯಲ್ಲಿಯೇ ಬಿಟ್ಟು ಬೇರೆ ಯಾರನ್ನೋ ಭೇಟಿಯಾಗಲು ಹೋಗಿದ್ದಾರೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಂದ ಗೂಳಿಯೊಂದು ಏಕಾಏಕಿ ಮಗುವಿನ ಮೇಲೆ ದಾಳಿ ನಡೆಸಿದೆ.ಇದನ್ನು ಕಂಡ ಅಮಾಯಕ ಅಜ್ಜ ಓಡಿ ಬಂದು ಮಗುವನ್ನು ಎತ್ತಿಕೊಂಡಿದ್ದಾರೆ. ಘಟನೆಯಿಂದ ಮಗುವಿಗೆ ಗಂಭೀರವಾದ ಗಾಯವಾಗಿದೆ.
