LATEST NEWS
ಗುಜರಿ ವಸ್ತುಗಳಿಂದ ತಯಾರಿಸಿದ ನಾಲ್ಕು ಚಕ್ರದ ವಾಹನ : ವಾಹನ ಮೆಚ್ಚಿಕೊಂಡ ಆನಂದ್ ಮಹೀಂದ್ರಾರಿಂದ ಬೊಲೇರೋ ಗಿಫ್ಟ್
ಮಹಾರಾಷ್ಟ್ರ ಡಿಸೆಂಬರ್ 23: ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಗುಜರಿ ವಸ್ತುಗಳನ್ನು ಬಳಸಿ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ . ಹಳೆಯ ಕಾರಿನ ಭಾಗಗಳನ್ನು ಬಳಸಿ ಈ ವಾಹನವನ್ನು ತಯಾರಿಸಲಾಗಿದೆ . ಮಗನ ಆಸೆ ಪೂರೈಸಲು ತಯಾರಿಸಿದ ಈ ವಾಹನ ಈಗ ಮಹೇಂದ್ರ ಗ್ರುಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ .
ಹಿಸ್ಟಾರಿಕಾನೋ ಎನ್ನುವ ಯುಟ್ಯೂಬ್ ಚಾನೆಲ್ ಪ್ರಕಾರ ಈ ವಾಹನವನ್ನು ದತ್ತಾತ್ರೆಯ ಲೊಹರ್ ಎನ್ನುವ ವ್ಯಕ್ತಿ ತಯಾರಿಸಿದ್ದಾರೆ. ಅಲ್ಪ ವಿದ್ಯಾಭ್ಯಾಸವನ್ನು ಹೊಂದಿದ್ದ ದತ್ತಾತ್ರೆಯ ಎನ್ನುವವರು ಮಗನ ಗಾಡಿಯ ಆಸೆ ಪೂರೈಸಲು ವಿಭಿನ್ನವಾಗಿ ಯೋಚಿಸಿ , ಗುಜರಿ ವಸ್ತುಗಳಿಂದ ವಾಹನ ತಯಾರಿಸಿದ್ದಾರೆ . ಆನಂದ್ ಮಹಿಂದ್ರಾ ಅವರು ಈ ವಾಹನವನ್ನು ನೋಡಿ ಮೆಚ್ಚಿಕೊಂಡಿದ್ದು , ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ . ನಮ್ಮ ಜನರ ಕ್ರಿಯೇಟಿವಿಟಿ , ಜಾಣ್ಮೆಯನ್ನು ನಾನು ಸದಾ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ .
This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grille pic.twitter.com/oFkD3SvsDt
— anand mahindra (@anandmahindra) December 21, 2021
ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ದತ್ತಾತ್ರೆಯ ಲೋಹರ್ ಅವರು ತಯಾರಿಸಿದ ವಾಹನದ ಕುರಿತು 45 ಸೆಕೆಂಡ್ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ ವೀಡಿಯೋದಲ್ಲಿ ವಾಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಲಾಗಿದೆ . ಕೇವಲ 60 ಸಾವಿರ ರೂ . ಗಳಲ್ಲಿ ತಯಾರಾದ ಈ ವಾಹನವು ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಕಂಡುಬರುವ ಕಿಕ್ ಸ್ಟಾರ್ಟ್ ವಿಧಾನವನ್ನು ಹೊಂದಿದೆ
ಇನ್ನೊಂದು ವೀಡಿಯೋದಲ್ಲಿ ದತ್ತಾತ್ರೆಯ ಅವರು ನಿರ್ಮಿಸಿದ ಗಾಡಿಯು ಉಳಿದ ವಾಹನಗಳಂತೆ ನಿಯಮವನ್ನು ಹೊಂದಿಲ್ಲದ ಕಾರಣ ಸ್ಥಳೀಯ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಿಲ್ಲ . ಈ ಕಾರಣಕ್ಕಾಗಿ ಆನಂದ್ ಮಹೀಂದ್ರಾ ಅವರು ಬೊಲೆರೋವನ್ನು ಉಡುಗೊರೆಯಾಗಿ ನೀಡಿದ್ದಾರೆ . ಅಲ್ಲದೆ ದತ್ತಾತ್ರೆಯ ಅವರು ತಯಾರಿಸಿದ ವಾಹನವನ್ನು ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಇತರರಿಗೆ ಸ್ಪೂರ್ತಿಯಾಗುವಂತೆ ಪ್ರದರ್ಶಿಲಾಗುವುದು ಎಂದು ತಿಳಿಸಿದ್ದಾರೆ . ಆನಂದ್ ಮಹೀಂದ್ರಾ ಅವರ ಟ್ವೀಟ್ ನೆಟ್ಟಿಗರನ್ನು ಆಕರ್ಷಿಸಿದ್ದು 14 ಸಾವಿರಕ್ಕೂ ಹೆಚ್ಚು ಲೈಕ್ ಮತ್ತು 1300 ಕ್ಕೂ ಅಧಿಕ ರೀಟ್ವೀಟ್ಗಳನ್ನು ಮಾಡಿದ್ದಾರೆ .