Connect with us

    FILM

    ಯುವರಾಜ್​ ಸಿಂಗ್-ಹಜೆಲ್​ ಕೀಚ್​​ ದಂಪತಿಗೆ ಗಂಡು ಮಗು

    ಮುಂಬೈ : ಭಾರತದ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಮತ್ತು ನಟಿ ಹಜೆಲ್​ ಕೀಚ್ ​ ದಂಪತಿಗೆ ತಮ್ಮ ಮೊದಲ ಮಗುವಿನ ಆಗನಮ ಖುಷಿಯನ್ನು ಹಂಚಿಕೊಂಡಿದ್ದಾರೆ.


    ಯುವರಾಜ್​ ಸಿಂಗ್ ಸೋಷಿಯಲ್​ ಮೀಡಿಯಾ ಮೂಲಕ ತಮಗೆ ಗಂಡು ಮಗು ಹುಟ್ಟಿದ್ದನ್ನು ತಿಳಿಸಿದ್ದಾರೆ. ಇಂದು ನಮಗೆ ಗಂಡು ಮಗು ಹುಟ್ಟಿದೆ ಎಂಬ ವಿಷಯವನ್ನು ನಮ್ಮ ಫ್ಯಾನ್ಸ್​​, ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಲು ತುಂಬ ಉತ್ಸುಕರಾಗಿದ್ದೇವೆ.

    ಇಂಥ ಸುಂದರವಾದ ಆಶೀರ್ವಾದ ನೀಡಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನೀವು ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ. ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ ಇಬ್ಬರೂ ಕೂಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ.

    ಅಪ್ಪ-ಅಮ್ಮನಾದ ಯುವರಾಜ್​ ಸಿಂಗ್​ ಮತ್ತು ಹಜೆಲ್​ ಕೀಚ್​ಗೆ ಸೌರವ್​ ಗಂಗೂಲಿ, ಸಾನಿಯಾ ಮಿರ್ಜಾ, ಇರ್ಫಾನ್​ ಪಠಾಣ್​ ಸೇರಿ ಅನೇಕರು ಶುಭ ಹಾರೈಸಿದ್ದಾರೆ. ಅಂದಹಾಗೆ, ಯುವರಾಜ್​ ಸಿಂಗ್​ ಮತ್ತು ಹಜೆಲ್​ ವಿವಾಹ 2016ರಲ್ಲಿ ನಡೆದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply