LATEST NEWS
ಕೊರೊನಾಗೆ ಬಲಿಯಾದ ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ

ನವದೆಹಲಿ ಎಪ್ರಿಲ್ 30: ದೇಶದ ಖ್ಯಾತ ನ್ಯಾಯವಾದಿ, ಎರಡು ಬಾರಿ ದೇಶದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಸೋಲಿ ಸೊರಾಬ್ಜಿ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಸೋಲಿ ಜೆಹಾಂಗೀರ್ ಸೊರಾಬ್ಜಿ ಅವರು 1953ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದ್ದರು. 1971ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಸೀನಿಯರ್ ಕೌನ್ಸಿಲ್ ಆಗಿ ಅವರು ಪದನಿಮಿತ್ತರಾದರು. ಮೊದಲ ಬಾರಿಗೆ 1989-90 ಅವಧಿಗೆ ಬಳಿಕ, 1998-2000 ಅವಧಿಗೆ ಮತ್ತೊಮ್ಮೆ ಅವರು ಅಟಾರ್ನಿ ಜನರಲ್ ಆಗಿ ನಿಯುಕ್ತರಾಗಿದ್ದರು. ಕಾನೂನು ವಿಭಾಗದಲ್ಲಿ ಅವರ ಸೇವೆಗೆ ಭಾರತದ ಅತ್ಯುನ್ನತ ಪ್ರಶಸ್ತಿ ವಿಭೂಷಣ ಅವರಿಗೆ ಒಲಿದು ಬಂದಿತ್ತು.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪ್ರಕರಣವೆಂದು ಕರೆಯಲಾಗುವ ಕೇಶವಾನಂದ ಭಾರತೀ ಸ್ವಾಮಿಜಿ ಅವರ ಪರಕಣದಲ್ಲಿ ವಾದ ಮಂಡಿಸಿದ್ದರು.