Connect with us

DAKSHINA KANNADA

ಹಾಡುಹಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿಕಾಣಿಸಿಕೊಂಡ ಕಾಡಾನೆ..!

ಕಡಬ, ಜನವರಿ 09: ಕಾಡಾನೆಯೊಂದು ಹಾಡುಹಗಲೇ ನಿರ್ಭೀತಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಕಾಡಿನ ಹಾದಿ ಹಿಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಇದರ ಉದನೆ ಸಮೀಪದ ಕಲಪ್ಪಾರು ಎಂಬಲ್ಲಿ ಈ ಘಟನೆ ನಡೆದಿದ್ದು, ಕಲಪ್ಪಾರು ಸಮೀಪ ಹೆದ್ದಾರಿ ದಾಟಿ ಆನೆ ಪುತ್ತಿಗೆ ಕಾಡಿಗೆ ಹೆಜ್ಜೆ ಹಾಕಿದೆ.

ಸ್ಥಳೀಯರು ಕಾಡಾನೆ ಹೆದ್ದಾರಿ ದಾಟುತ್ತಿರುವ ದೃಶ್ಯಗಳನ್ನು ‌ಮೊಬೈಲ್ ನಲ್ಲಿ ಸರೆಹಿಡಿದಿದ್ದಾರೆ. ಜನವಸತಿ ಇರುವ ಪ್ರದೇಶದಲ್ಲಿ ಈ ರೀತಿ ಕಾಡಾನೆಗಳು ನುಗ್ಗುತ್ತಿರುವುದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *