Connect with us

    DAKSHINA KANNADA

    ಫಾರೆಸ್ಟ್ ಗಾರ್ಡ್ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಪೊಲೀಸರ ವಶ

    ಫಾರೆಸ್ಟ್ ಗಾರ್ಡ್ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಪೊಲೀಸರ ವಶ

    ಪುತ್ತೂರು ಅಗಸ್ಟ್ 2: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮರಗಳ್ಳರನ್ನು ತಡೆದ ಹಿನ್ನಲೆಯಲ್ಲಿ ಫಾರೆಸ್ಟ್ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಉಪ್ಪಿನಂಗಡಿ ಎಸ್ ಐ ನೇತೃತ್ವದಲ್ಲಿ ಶೀಘ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲ್ಲೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ ಎಂಬಲ್ಲಿ ನಿನ್ನೆ ತಡರಾತ್ರಿ ಗುಂಡ್ಯಾ ಚೆಕ್ ಪೋಸ್ಟ್‌ ಬಳಿ ಕರ್ತವ್ಯದಲ್ಲಿದ್ದ ಗಾರ್ಡ್ ರಾಜೇಶ್ ಅಕ್ರಮವಾಗಿ ಬೆಲೆ ಬಾಳುವ ಮರ ಸಾಗಾಟ ನಡೆಸುತ್ತಿದ್ದ ಲಾರಿಯನ್ನು ತಡೆ ಹಿಡಿದಿದ್ದರು. ಮರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕೇಳಿದ ಸಂದರ್ಭದಲ್ಲಿ ಲಾರಿಯಲ್ಲಿದ್ದ ಮೂವರು ಮರಗಳ್ಳರು ರಾಜೇಶ್ ಅವರಿಗೆ ಗಂಭೀರ ಹಲ್ಲೆ ನಡೆಸಿ ಲಾರಿಯೊಂದಿಗೆ ಪರಾರಿಯಾಗಿದ್ದರು.

    ಉಪ್ಪಿನಂಗಡಿ ಎಸ್.ಐ ನೇತೃತ್ವದಲ್ಲಿ ಶೀಘ್ರ‌ ಕಾರ್ಯಾಚರಣೆ‌ ನಡೆಸಿ ಆರೋಪಿಗಳ ವಶಕ್ಕೆ ಪಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಫಾರೆಸ್ಟ್ ಗಾರ್ಡ್ ರಾಜೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *