LATEST NEWS
ಅಕ್ರಮ ದನ ಸಾಗಾಟ 4 ಮಂದಿ ಬಂಧನ
ಅಕ್ರಮ ದನ ಸಾಗಾಟ 4 ಮಂದಿ ಬಂಧನ
ಮಂಗಳೂರು ಆಗಸ್ಟ್ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಅಕ್ರಮ ದನ ಸಾಗಾಟ ಪ್ರಕರಣ. ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುತ್ತಿದ್ದು, ಇಂದು ಮತ್ತೆ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಾನುವಾರುಗಳನ್ನು ಉಡುಪಿಯಿಂದ ಕೇರಳಕ್ಕೆ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ 4 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಹೊರವಲಯದ ಕಾವೂರು ಠಾಣೆಯ ಪೊಲೀಸರು ಅಕ್ರಮ ಜಾನುವಾರು ಸಾಗಾಟದ ಖಚಿತ ಮಾಹಿತಿ ಪಡೆದು ಉಡುಪಿ ಮಂಗಳೂರು ಒಳ ರಸ್ತೆಯಲ್ಲಿ ವಾಹನ ತಪಾಸಣೆ ಆರಂಭಿಸಿದ್ದರು . ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ .
ಲಾರಿಯನ್ನು ತಪಾಸಣೆಗೆ ಒಳ ಪಡಿಸಿದಾಗ 7 ದನ ಹಾಗೂ 6 ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ . ಈ ಹಿನ್ನೆಲೆಯಲ್ಲಿ ಲಾರಿ ಚಾಲಕ ನಯೀಮುದ್ದೀನ್ ಹಾಗೂ ಲಾರಿಯಲ್ಲಿದ್ದ ರಾಧಾಕೃಷ್ಣ ಅವರನ್ನುಪೊಲೀಸರು ಬಂಧಿಸಿದ್ದಾರೆ.
ಈ ಲಾರಿಯಲ್ಲಿದ್ದ ಜಾನುವಾರುಗಳನ್ನು ಸುರಕ್ಷಿತವಾಗಿ ಕರ್ನಾಟಕ ಗಡಿ ದಾಟಿಸುವ ಹೊಣೆ ಹೊತ್ತಿದ್ದ ಮತ್ತಿಬ್ಬರನ್ನು ನಂತರ ಕಾರು ಸಮೇತ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಭಾಷ್ ಶೆಟ್ಟಿ ಹಾಗೂ ಸತೀಶ್ ಎಂದು ಗುರುತಿಸಲಾಗಿದೆ . ಬಂಧಿತರಿಂದ ಒಂದು ಲಾರಿ 13 ಜಾನುವಾರುಗಳು ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.