LATEST NEWS
ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾರಣಾಂತಿಕ ಹಲ್ಲೆ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾರಣಾಂತಿಕ ಹಲ್ಲೆ
ಪುತ್ತೂರು ಸೆಪ್ಟೆಂಬರ್ 28: ಅರಣ್ಯದಲ್ಲಿ ಮರ ಕಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಇಲ್ಲಿಯ ಪುದುವೆಟ್ಟು ಕಾಡಿನಲ್ಲಿ ಮರ ಕಡಿದ ಆರೋಪದಡಿ ಸ್ಥಳೀಯ ನಿವಾಸಿ ಕಮಲ್ ದಾಸ್ ಎಂಬುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿ ಕೀರ್ತನ್ ಎಂಬವರು ಆರೋಪಿ ಕಮಲ್ ದಾಸ್ ಅವರನ್ನು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೀರ್ತನ್ ಅವರು ಕಮಲ ದಾಸ್ ಅವರನ್ನು ಕಟ್ಟಿಹಾಕಿ ಹಿಂಬದಿಗೆ ಲಾಠಿಯಿಂದ ಮನ ಬಂದಂತೆ ಬಾರಿಸಿದ್ದಾರೆ. ಈ ಪರಿಣಾಮ ಕಮಲ್ ದಾಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಹಲ್ಲೆ ನಡೆಸಿದ ಅಧಿಕಾರಿ ಕೀರ್ತನ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.